
ಉಡುಪಿ: ಶಿರಿಯಾರ ವ್ಯವಸಾಯ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಆರೋಪಿಸಲಾಗಿದೆ. ಪಾರದರ್ಶಕ ಕಾಯ್ದೆ ಉಲ್ಲಂಘಿಸಿ 4.50 ಕೋಟಿ ರೂ. ಮೌಲ್ಯದ ಸಂಘದ ನೂತನ ಕಟ್ಟಡದ ಕಾಮಗಾರಿ ಮಾಡಿರುವುದಾಗಿ ಆರೋಪಿಸಲಾಗುತ್ತಿದೆ.
ಶಿರಿಯಾರ ವ್ಯವಸಾಯ ಸಹಕಾರಿ ಸಂಘದ ಸದಸ್ಯ ರಾಕೇಶ್ ನಾಯಕ್ ಈ ಬಗ್ಗೆ ಮಾತನಾಡಿದ್ದು, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಭಾರೀ ವ್ಯವಹಾರ ಆಗಿರುವುದಾಗಿ ಅವರು ಆರೋಪಿಸಿದ್ದಾರೆ..ಕಟ್ಟಡ ಕಟ್ಟಡ ಕಾಮಗಾರಿಯಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ 4.50 ಕೋಟಿ ಮಿಕ್ಕಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು,ಇ ಟೆಂಡರ್ ಅನ್ನೂ ಕರೆಯದೆ ಭಾರೀ ಅವ್ಯವಹಾರ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
1.50 ಕೋಟಿ ರೂ. ನೀಡಿ ಜಾಗ ಖರೀದಿ ಮಾಡಿದ್ದಾರೆ ಆದ್ರೇ ಇಲಾಖೆಯ ಆದೇಶದ ಅಗತ್ಯವೇ ಇಲ್ಲ ಎಂಬಂತೆ ವರ್ತಿಸಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ., ಮೂರು ವರ್ಷಕ್ಕೆ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿದ್ದು, ಅದರಲ್ಲೂ ಇಲಾಖೆಯ ಆದೇಶ ಪಾಲಿಸಿಲ್ಲ. ಇಲಾಖೆಯ ಅಧಿಕಾರಿಗಳು ಶೀಘ್ರ ಈ ಬಗ್ಗೆ ತನಿಖೆ ನಡೆಸಬೇಕು. ಅದಕ್ಕೆ ಪೂರಕವಾಗುವಂತಹ ದಾಖಲೆ ನಮ್ಮ ಬಳಿಯಲ್ಲಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ಅಧ್ಯಕ್ಷರೂ, ಕಾರ್ಯನಿರ್ವಹಣಾಧಿಕಾರಿ ಜಂಟಿಯಾಗಿ ಸಾಲಗಳನ್ನು ನೀಡಿದ್ದು, ಕೋಟ್ಯಾಂತರ ರೂ. ಅವ್ಯವಹಾರ ನಡೆದಿದ್ದು, ದಾಖಲೆಗಳಿದ್ದು, ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
Leave a Reply