Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾತ್ರೋ ರಾತ್ರಿ ವೆಂಕರಮಣ ಆರ್ಕೆಡ್ ನ ಮಲ, ಮೂತ್ರ, ಕೊಳಚೆ ನೀರು ಶೆಟ್ಟಿ ಲಂಚ್ ಹೋಮ್, ಪ್ರಭಾತ್ ಟ್ರೇಡರ್ಸ್ ಮತ್ತು  ರಕ್ತೇಶ್ವರಿ ಹಿಂಭಾಗಕ್ಕೆ ತಿರುಗಿಸಿದ ಕೊತ್ವಲ್ ನ ಬೆಂಬಲಕ್ಕೆ ನಿಂತರೆ ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನ್ ದಾಸ ಶೈಣೆ  ಮತ್ತು ಮುಖ್ಯಧಿಕಾರಿ!!???

ಕುಂದಾಪುರ : ಸರಿಸುಮಾರು ಒಂದು ತಿಂಗಳ ಹಿಂದೆ ಪತ್ರಿಕೆಗಳು ವೆಂಕಟರಮಣ ಆರ್ಕೆಡ್ ನ  ಮಲ, ಮೂತ್ರ, ಕೊಳಚೆ ನೀರನ್ನು ಚರಂಡಿಗೆ ಬಿಟ್ಟು ರಾಮಮಂದಿರ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡು, ಡೆಂಗು, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭಾಗ್ಯವನ್ನೇ ನೀಡಿದ್ದಾರು ಎಂದರೆ ತಪ್ಪಿಲ್ಲ, ಕುಂದಾಪುರದ ಹಿರಿಯ ವಕೀಲರು, ವೈದ್ಯರು, ವಾರ್ಡ ಕೌನ್ಸಿಲರ್ ಎ ಬಗ್ಗೆ ದೂರು ನೀಡಿದ್ದು ಕುಂದಾಪುರದ ಜನತೆಗೆ ತಿಳಿದಿದ್ದೆ. ಇಷ್ಟೆಲ್ಲ ಆದರೂ  ಪುರಸಭೆ ಅಧಿಕಾರಿಗಳಿಗೆ ಕ್ಯಾರೇ ಎನ್ನಲಿಲ್ಲ ಶೇಷಾಯ್ಯ ಕೊತ್ವಲ್, ನಂತರ ಪತ್ರಿಕೆಗಳಲ್ಲಿ ಸುದ್ದಿ ಆಗಿ ಎಚ್ಚೆತ್ತು ಕೊಂಡ ಕುಂದಾಪುರ ಪುರಸಭೆ ವೆಂಕಟರಮಣ ಆರ್ಕೆಡ್ ಕೊಳಚೆ ನೀರು ಬರುವ ಮೋರಿಯನ್ನು  ಮುಚ್ಚಿ ಜನರಿಗೆ ನಿಟ್ಟಿಸಿರು ಬಿಡುವಂತೆ ಮಾಡಿದರು.

ಹೌದು, 10 ದಿನ ಪುರಸಭೆಯ ದಟ್ಟ ನಿರ್ಧಾರದಿಂದ ಸಾರ್ವಜನಿಕರ ಬವಣೆ ಏನು ಎಂದು ಶೇಷಾಯ್ಯ ಕೊತ್ವಲ್ ನಿಗೆ  ಅರಿವು ಮೂಡಿಸುವಲ್ಲಿ ಪುರಸಭೆ ಯಶ್ವಸಿಯಾಗಿದೆ. ಆದರೆ ಜನವರಿ 7ರಂದು ರಾತ್ರೋ ರಾತ್ರಿ ವೆಂಕಟರಮಣ ಆರ್ಕೆಡ್ ನ ಇನ್ನೊಂದು ಭಾಗದಲ್ಲಿ ಮಲ, ಮೂತ್ರ, ಕೊಳಚೆ ನೀರನ್ನು ಯಾವುದೇ ಪುರಸಭೆ ಅನುಮತಿ ಪಡೆಯಾದೆ, ಪೋಲ್ಯೂಷನ್ ಕಂಟ್ರೋಲ್ ಅನುಮತಿ ಪಡೆಯದೇ ಈಗ ಶೆಟ್ಟಿ ಲಂಚ್ ಹೋಮ್, ಪ್ರಭಾತ್ ಟ್ರೇಡರ್ಸ್ ಮತ್ತು  ರಕ್ತೇಶ್ವರಿ ಹಿಂಭಾಗಕ್ಕೆ ತಿರುಗಿಸಿ ಕೊಳಚೆ ನೀರು ಚರಂಡಿಗೆ ಸೇರುವ ಹಾಗೇ ಅಕ್ರಮ ಕಾಮಗಾರಿ ನಡೆಸಿದ್ದು, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿದೆ. ಇದರಲ್ಲಿ ಪುರಸಭೆ ಮುಖ್ಯಾಅಧಿಕಾರಿ ಮತ್ತು ಪುರಸಭೆ ಅಧ್ಯಕ್ಷರೇ ಈ ಉಪಾಯವನ್ನು ನೀಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ. ಈ ಕೂಡಲೇ ಅಕ್ರಮ ಕಾಮಗಾರಿ ನಡೆಸಿದ ಶೇಷಾಯ್ಯ ಕೊತ್ವಲ್ ನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕುಂದಾಪುರದಲ್ಲಿ ಅಕ್ರಮ ಕಾಮಗಾರಿ ಮಾಡುತ್ತಿರುವವರಿಗೆ ಮಾದರಿ ಆಗಬೇಕಾಗಿದೆ ಕುಂದಾಪುರ ಪುರಸಭೆ ಮುಂದಿನ ನಡೆ.

Leave a Reply

Your email address will not be published. Required fields are marked *