
ಕುಂದಾಪುರ: ಪುರಸಭೆಯ ಕಳೆದ ಸಾಮಾನ್ಯ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿ , ಪುರಸಭೆ ಸದಸ್ಯರೊಬ್ಬರು ಹಂಪ್ಸ್ ವಿಷಯದಲ್ಲಿ ಬೊಂಬಡಿ ಹೊಡೆದಿದ್ದೇ ಹೊಡೆದಿದ್ದು, ಅವರು ಕೇಳಿದರಲ್ಲಿ ತಪ್ಪೇನಿಲ್ಲ ಬಿಡಿ! ಆದರೆ ಮೊದಲಿನಿಂದಲೂ ನಡೆದು ಬಂದದ್ದನ್ನು ಗಾಳಿಗೆ ತೂರಿ ಇವರ ಮೂಗಿನ ನೇರಕ್ಕೆ ನಿರ್ಣಯ ಮಾಡಿದ್ದು ಎಷ್ಟು ಸರಿ? ಅದು ಇರಲಿ ಹಂಪ್ಸ್ ವಿಷಯದಲ್ಲಿ ಬೊಬ್ಬೆ ಹೊಡೆದವರು ಈಗ ಪುರಸಭೆ ಅಧ್ಯಕ್ಷರು ಕಾನೂನು ಬಾಹಿರವಾಗಿ ತಮ್ಮ ಮನೆಯ ಮೇಲಂತಸ್ತಿಗೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಟ್ಟಿದ ಕಟ್ಟಡದ ಬಗ್ಗೆ ಏನೆನ್ನುತ್ತಾರೆ ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿ?
ಬನ್ನಿ ಇದರ ಬಗ್ಗೆ ಸವಿಸ್ತಾರವಾಗಿ ಹೇಳುತ್ತೇನೆ, ನೀವೇ ನಿರ್ಧಾರ ತೆಗೆದುಕೊಳ್ಳಿ, ಕುಂದಾಪುರದ ಹೃದಯ ಭಾಗದಲ್ಲಿರುವ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವವೆಂದರೆ ಅದೊಂದು ಸಂಭ್ರಮ ಸಡಗರದಿಂದ ಕುಂದಾಪುರದ ಜನತೆ ಭಾಗವಹಿಸುತ್ತಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ರಥೋತ್ಸವದ ಸಂದರ್ಭ ಪುರ ಮೆರವಣಿಗೆ ಹೊರಡುವುದು ಪ್ರತೀತಿ ಹಿಂದಿನ ಕಾಲದಲ್ಲಿ ಕುಂದಾಪುರದ ರಸ್ತೆಗಳಲ್ಲಿ ಹಂಪ್ಸ್ ಗಳು ಇರಲಿಲ್ಲ. ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಪುರ ಮೆರವಣಿಗೆಯಲ್ಲಿ ತೇರು ಸಾಗಿ ಬಂದು ಭಕ್ತಾದಿಗಳು ಕಣ್ಣು ತುಂಬಿಕೊಳ್ಳುತ್ತಿದ್ದರು. 2016-17ರಲ್ಲಿ ಮುಖ್ಯ ಅಧಿಕಾರಿ ಕುಂದಾಪುರದ ಪೇಟೆ ಭಾಗದಲ್ಲಿ ಹಂಪ್ಸ್ ಗಳನ್ನು ಅಳವಡಿಸಿದ್ದರು. ಆದರೆ ಇತ್ತೀಚೆಗೆ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವಕ್ಕೆ ಮುನ್ನ ಕುಂದಾಪುರದ ರಸ್ತೆಗಳಲ್ಲಿರುವ ಹಂಪ್ಸ್ ಗಳನ್ನು ತೆಗೆದು ರಥೋತ್ಸವದ ನಂತರ ಮತ್ತೆ ಹಂಪಗಳನ್ನು ಕುಂದಾಪುರ ಪುರಸಭೆಯವರು ರಸ್ತೆಗಳಲ್ಲಿ ಅಳವಡಿಸುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.
ಕಳೆದ 3-4 ವರ್ಷಗಳ ಹಿಂದೆ ದೇವಸ್ಥಾನದ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದ ಒಬ್ಬರು ಮಾಜಿ ಪುರಸಭೆ ಅಧ್ಯಕ್ಷರು ರಥೋತ್ಸವದ ಸಂದರ್ಭದಲ್ಲಿ ತೆರವು ಮಾಡಿದ ಹಂಪ್ಸ್ ಗಳನ್ನು ದೇವಸ್ಥಾನದ ಖರ್ಚಿನಿಂದಲೇ ಮಾಡಿ ಕೊಡುತ್ತೇವೆ ಎಂದು ಪುರಸಭೆಯವರ ಎದುರಿಗೆ ನಾನು ದೊಡ್ಡ ಸಂಭವಿತ ಎಂದು ತೋರಿಸಿಕೊಳ್ಳಲು ಹೋಗಿ ಒಂದು ಎಡವಟ್ಟಿಗೆ ದಾರಿ ಮಾಡಿ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಬಾರಿಯ ಸಾಮಾನ್ಯ ಸಭೆಯ ನಿರ್ಣಯ ಇಂತಿದೆ
07: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ತೆರವುಗೊಳಿಸಲಾದ ಶಿಥಿಲಗೊಂಡಿರುವ ಹಂಪ್ಸ್ಗಳನ್ನು ಹೊಸದಾಗಿ ನಿರ್ಮಿಸುವ ವಿಚಾರ.
నిರ್ಣಯ 07:
ಸದರಿ ವಿಷಯದ ಬಗ್ಗೆ ಚರ್ಚಿಸಲಾಯಿತು. ಶಿಥಿಲಗೊಂಡು ತೆರವುಗೊಳಿಸಲಾದ ಹಂಪ್ಸ್ ಗಳನ್ನು ಅದೇ ಸ್ಥಳದಲ್ಲಿಯೇ ನಿರ್ಮಿಸುವುದು, ಸದರಿ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಮೂಲಕ ನಿರ್ವಹಿಸುವುದು, ಈ ಸಂಬಂಧ ತಗಲುವ ವೆಚ್ಚವನ್ನು ಪುರಸಭಾ ನಿಧಿಯಿಂದ ಭರಿಸುವುದು. ಸಂಬಂಧಪಟ್ಟ ಬಿಲ್ಲನ್ನು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಗೆ ತಲುಪಿಸಲು ನಿಶ್ಚಯಿಸಲಾಯಿತು. ಅಲ್ಲದೇ ಮುಂದಿನ ದಿನಗಳಲ್ಲಿ ಪುರಸಭೆಯ ಅನುಮತಿಯನ್ನು ಪಡೆದು ಹಂಪುಗಳನ್ನು ತೆರವುಗೊಳಿಸಿದ್ದಲ್ಲಿ, ಪುನಃ ಸ್ವಂತ ಖರ್ಚಿನಲ್ಲಿಯೇ ಮೊದಲಿನ ರೀತಿಯಲ್ಲಿ ಹಂಪುಗಳನ್ನು ಅಳವಡಿಸುವುದು ಅಲ್ಲದೇ, ಮುಂದಿನ ದಿನಗಳಲ್ಲಿ ಸದರಿ ಹಂಪ್ಸ್ ಗಳನ್ನು ವಿರೂಪಗೊಳಿಸಿದವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.
ಈಗ ನೀವೆ ಹೇಳಿ ಈ ನಿರ್ಧಾರ ಸರಿಯಾಗಿದೇ ಎನ್ನುವುದಾದರೆ ಪುರಸಭೆ ಅಧ್ಯಕ್ಷರು ಕಾನೂನು ಬಾಹಿರವಾಗಿ ತಮ್ಮ ಮನೆಯ ಮೇಲಂತಿಸ್ತಿಗೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಟ್ಟಿದ ಕಟ್ಟಡದ ಬಗ್ಗೆ ಏನನ್ನುತ್ತಾರೆ ಪುರಸಭೆ ಸದಸ್ಯರು?ಹಾಗೂ ಮುಖ್ಯ ಧಿಕಾರಿಗಳು ಹಾಗಿದ್ದಲ್ಲಿ ಹಾಲಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಪ್ರಾಮಾಣಿಕವಾಗಿ ಇವರ ಮೇಲೆ ಮೊದಲು ಕ್ರಮ ಕೈಗೊಳ್ಳುವವರೇ ಮತ್ತು ಈ ನಿರ್ಣಯವನ್ನು ಮೊದಲು ರದ್ದುಗೊಳಿಸಬೇಕಾಗಿ ವಿನಂತಿ. ಪುರಸಭೆ ಅಧ್ಯಕ್ಷರಿಗೆ ನೈತಿಕತೆ ಇರುವುದೇ ಆದಲ್ಲಿ, ಹಿಂದುತ್ವ ಬಗ್ಗೆ ದೊಡ್ಡ ಭಾಷಣ ಬಿಗಿಯುವುದು ಕಾಟಚರವೇ? ಪೇಟೆ ಶ್ರೀ ವೆಂಕಟರಮಣ ದೇವಾಲಯದ ಮಾಜಿ ಅಧ್ಯಕ್ಷ ಸ್ಥಾನದಲ್ಲಿ ಇದ್ದವರಾಗಿದ್ದು ಮೌನವಹಿಸಿದ್ದು ನಿಮಗೆ ಶೋಭೆಯೇ? ಮೊದಲು ತಮ್ಮ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕೇಶವ್ ಭಟ್ ಅಗ್ರಹಿಸಿದ್ದಾರೆ.













Leave a Reply