Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ: ಜಾಗದ ವಿಚಾರದಲ್ಲಿ ತಕರಾರು : ವ್ಯಕ್ತಿಯೊಬ್ಬರಿಗೆ ಹುಲ್ಲು ಕಟಾವು ಯಂತ್ರದಿಂದ ಹಲ್ಲೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಜಾಗ ಮತ್ತು ಗರಡಿ ಮನೆ ವಿಚಾರದಿಂದ ತಕರಾರುವಾಗಿ ಹುಲ್ಲು ಕಟಾವು ಯಂತ್ರದಿಂದ ಹಲ್ಲೆ ಮಾಡಿ ವ್ಯಕ್ತಿ ಕೈಗೆ ಗಂಭೀರ ಗಾಯಗೊಂಡ ಘಟನೆ ಬೆಳಿಗ್ಗೆ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮೂಡ್ಕೇರಿ ಗರಡಿಮನೆ ಬಳಿ ಸಂಭವಿಸಿದೆ.

ಹಲ್ಲೆಗೊಳಗಾದ ವ್ಯಕ್ತಿ ಗರಡಿಮನೆ, ಮೂಡ್ಕೇರಿ ದಿವಂಗತ ಗೋಪಾಲ ಪೂಜಾರಿ ಅವರ ಮಗ ಕೇಶವ ಪೂಜಾರಿ(48) ಎಂದು ತಿಳಿದು ಬಂದಿದೆ.

ಬಸ್ರೂರಿನ ಕೇಶವ ಎಂಬವರ ಗದ್ದೆಯಲ್ಲಿ ವಿಠಲ ಪೂಜಾರಿ ಎಂಬವರು ಅಕ್ರಮವಾಗಿ ಹುಲ್ಲು ಕೊಯ್ದಿದ್ದೇ ಕಾರಣವಾಗಿ ಎರಡೂ ಕಡೆಯವರ ನಡುವೆ ವಾಗ್ವಿವಾದ, ಹೊಡೆದಾಟಗಳು ನಡೆದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.

ಕೇಶವ ಮತ್ತು ವಿಠಲ ಪೂಜಾರಿ ಕಡೆಯವರ ನಡುವೆ ಜಾಗ ಮತ್ತು ಗರಡಿ ಮನೆ ವಿಚಾರವಾಗಿ ತಕರಾರು ಇದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲುಗೊಂಡಿದೆ.

ಜ. 21ರ ಮಂಗಳವಾರ ಬೆಳಿಗ್ಗೆ ವಿಠಲ ಪೂಜಾರಿ ಏಕಾಏಕಿ ಹುಲ್ಲು ಕೊಯ್ಯುವ ಮೆಷಿನ್‌ ಅನ್ನು ತಂದು ಬಸ್ರೂರು ಗ್ರಾಮದ ಮೂಡ್ಕೇರಿ ಗರಡಿಮನೆ ಬಳಿ ಇರುವ ಕೇಶವರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಹುಲ್ಲು ಕಟಾವು ಮಾಡತೊಡಗಿದರು.

ಆಗ ಕೇಶವ ವಿರೋಧಿಸಿದರು. ವಿಠಲ ಪೂಜಾರಿ ಮತ್ತು ವಿನೋದ ಸಿಟ್ಟುಗೊಂಡು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಿದರು.

ಆಗ ಕೇಶವ ಕೋರ್ಟ್ ಕೇಸಿನ ಬಗ್ಗೆ ಪ್ರಸ್ತಾಪಿಸಿ ಹುಲ್ಲು ಕೊಯ್ಯಬಾರದು ಎಂದು ತಿಳಿಹೇಳಿದರು. ಇಷ್ಟಕ್ಕೇ ವಿಠಲ ಪೂಜಾರಿಯು ಬೈದಾಡುತ್ತಾ ಕೈಯಲ್ಲಿದ್ದ ಹುಲ್ಲು ಕಟ್ ಮಾಡುವ ಮೆಷಿನ್ ಅನ್ನು ಅವರ ಮೇಲೆ ಹಾಯಿಸಿ ಇಲ್ಲೇ ಕೊಂದು ಹಾಕುತ್ತೇನೆ ಎಂದು ಬೆದರಿಸಿದರು. ಮಾತ್ರವಲ್ಲ ಆ ಯಂತ್ರವನ್ನು ಅವರ ಮೇಲೆ ಹಾಯಿಸಿದರು.
ಆಗ ಕೇಶವ ತಪ್ಪಿಸಿಕೊಳ್ಳಲು ತನ್ನ ಎಡ ಕೈಯನ್ನು ಅಡ್ಡ ತಡೆದಾಗ ಮೆಷಿನ್‌ನ ಬ್ಲೇಡ್‌ ಅವರ ಎಡಕೈ ಹಸ್ತಕ್ಕೆ ಮತ್ತು ಬೆರಳಿಗೆ ತಾಗಿ ಗಂಭೀರ ರಕ್ತಗಾಯ ಆಗಿರುತ್ತದೆ.

ಆಗ ಅಲ್ಲಿದ್ದ ಉಳಿದ ಆರೋಪಿಗಳಾದ ಅಪ್ಪು ಪೂಜಾರಿ,
ಉದಯ ಪೂಜಾರಿ, ವಿನೋದ, ರಾಘವೇಂದ್, ರಘು ಪೂಜಾರಿ, ರಾಘು ಪೂಜಾರಿ, ಸುಮತಿ, ಶಂಕರ ಪೂಜಾರಿ ಕೂಡ ಕೇಶವನನ್ನು ಸಾಯಿಸು ಎಂದು ಹೇಳುತ್ತಿದ್ದರು. ಆಗ ಕೇಶವರ ತಂಗಿ ತಪ್ಪಿಸಲು ಓಡಿ ಬಂದಾಗ ಅವರಿಗೂ ವಿನೋದ ಎಂಬವರು ಕೈಯಿಂದ ಮುಖಕ್ಕೆ, ಕೈ ರಟ್ಟೆಗೆ ಹೊಡೆದಿರುತ್ತಾರೆ. ಅವರೆಲ್ಲರಿಗೂ ಕೇಶವರನ್ನು ಹತ್ಯೆಗೆಯ್ಯುವ ಉದ್ದೇಶವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೀಗ ವಿಠಲ್ ಪೂಜಾರಿ, ಅಪ್ಪು ಪೂಜಾರಿ,
ಉದಯ ಪೂಜಾರಿ, ವಿನೋದ, ರಾಘವೇಂದ್, ರಘು ಪೂಜಾರಿ, ರಾಘು ಪೂಜಾರಿ, ಸುಮತಿ, ಶಂಕರ ಪೂಜಾರಿ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳು ಪ್ರತಿದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *