
ವರದಿ : ಸಚೀನ ಆರ್ ಜಾಧವ
ಸಾವಳಗಿ: ಶಿವಾಜಿ ಮಹಾರಾಜರು ಮುಸ್ಲಿಂ ಸಮುದಾಯದ ವಿರೋಧಿಯಾಗಿಲ್ಲ, ಎಲ್ಲಾ ಸಮುದಾಯದವರ ಜೋತೆ ಉತ್ತಮ ಒಡನಾಟ ಹೊಂದಿದ್ದರು, ಯಾರು ಕೂಡಾ ಮುಸ್ಲಿಂ ವಿರೋಧಿ ಅನ್ನಬಾರದು, ಶಿವಾಜಿ ಮಹಾರಾಜರ ಆದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಆರಾದ್ಯ ದೇವಿ ಶ್ರೀ ಅಂಬಾ ಭವಾನಿ ಜಾತ್ರಾ ಮಹೋತ್ಸವದ ನಾಲ್ಕುನೇಯ ದಿನವಾದ ಶುಕ್ರವಾರ ಧರ್ಮ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮರಾಠಾ ಸಮಾಜದವರು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕು, ಉತ್ತಮ ಒಡನಾಟ ಒಂದಿದ್ದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ನಂತರ ಆನಂದ ನ್ಯಾಮಗೌಡ ಮಾತನಾಡಿ ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಶ್ರೀ ಅಂಬಾ ಭವಾನಿ ದೇವಸ್ಥಾನದ ಭವನಕ್ಕೆ 1 ಕೋಟಿ ಅನುದಾನ ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಜೂರ ಮಾಡಿದರು, ಆ ಹಣ ಇನ್ನೂ ಬಂದಿಲ್ಲ, ಇದರ ಬಗ್ಗೆ ನಾನು ಸಂತೋಷ್ ಲಾಡ್ ಸೇರಿಕೊಂಡು ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯ ತಮ್ಮಣ್ಣಾಚಾರಿ ಜೋಷಿ, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ// ಎಂ. ಜಿ. ಮುಳೆ, ಸಿದ್ದು ಸೂರ್ಯವಂಶಿ, ಮೋಹನ ಜಾಧವ, ಸುಶೀಲ್ ಕುಮಾರ್ ಬೆಳಗಲಿ, ಎ. ಆರ್. ಶಿಂಧೆ, ಸುನೀಲ್ ಶಿಂಧೆ, ಬಸವರಾಜ ಸಿಂಧೂರ, ಸಂಜೀವ ಮಾಳಿ, ಸುಭಾಷ್ ಪಾಟೋಳಿ, ಬಾಪುಗೌಡ ಬುಲಗೌಡ, ಉಮೇಶ್ ಜಾಧವ್, ಶ್ರೀಮತಿ ಪೂಜಾ ಜಾಧವ, ಶ್ರೀಮತಿ ಅಂಬವ್ವ ಬಾಪಕರ, ಶ್ರೀಮತಿ ಅನುಪಮಾ ಕರಾಬೆ, ಸಂಜೀವ ಮೋಹಿತೆ, ಅರ್ಜುನ್ ಬಾಪಕರ, ಸದಾಶಿವ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Leave a Reply