
ಕೋಟ: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ಭಜನಾ ಮಂದಿರದ ಸಮೀಪ ಜರಗಿತು. ಯೋಗಗುರುಕುಲ ಇದರ ವಿದ್ವಾನ್ ಡಾ. ವಿಜಯ ಮಂಜರ್ ಪಾಂಡೇಶ್ವರ ಅಧ್ಯಕ್ಷತೆ ವಹಿಸಿ ಧಾಮಿಒðಕ ಪ್ರವಚನ ನೀಡಿದರು.
ಕಾರ್ಯಕ್ರಮದಲ್ಲಿ ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯ ಚಂದ್ರ ಆಚಾರ್ಯ ಸಾಸ್ತಾನ ಇವರನ್ನು ಹಾಗೂಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಲಾವಿದೆ ದೀಕ್ಷಾ ಎಸ್‌ಎಂ ಬ್ರಹ್ಮಾವರ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಮಾಲತಿದೇವಿ ದೇವಸ್ಥಾನ ಕಚ್ಚೂರು ಧರ್ಮದರ್ಶಿ ಬಾರ್ಕೂರು ಗೋಕುಲದಾಸ್ ಬಾರ್ಕೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಮಾಲತಿದೇವಿ ದೇವಸ್ಥಾನ ದೇಗುಲದ ಪ್ರಧಾನಕಾರ್ಯದರ್ಶಿ ಪ್ರೇಮಾನಂದ ಬಾರ್ಕೂರು,ಮಾಲತಿದೇವಿ ದೇವಸ್ಥಾನ ದೇಗುಲದ ಉಪಾಧ್ಯಕ್ಷ ವಾಸುದೇವ ಹಂಗಾರಕಟ್ಟೆ , ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂದಿರದ ಅಧ್ಯಕ್ಷರಾದ ದಿನಕರ್
ಸ್ವಾಗತಿಸಿದರು.ಕಾರ್ಯಕ್ರಮವನ್ನು ಸುನೀಲ್ ಪೂಜಾರಿ ನಿರೂಪಿಸಿ ವಂದಿಸಿದರು. ಧಾರ್ಮಿಕ ಕಾರ್ಯಕ್ರಮ
ಪಾಂಡೇಶ್ವರ ಶ್ರೀ ರಾಘವೇಂದ್ರ ಭಜನಾ ಮಂದಿರ, ಪಾಂಡೇಶ್ವರ ಇದರ ದಿವ್ಯ ಸಾನಿಧ್ಯದಲ್ಲಿ ಭಜನಾ ಕಾರ್ಯಕ್ರಮ ನೆರವರಿತು. ಆ ಪ್ರಯುಕ್ತ ಬೆಳಿಗ್ಗೆ ಅಭಿವೃದ್ಧಿಗಾಗಿ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ಕಾರ್ಯಕ್ರಮ ನೆರವೇರಲಿರುವುದು.
ಅಪರಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ನಾಟಕ ವಿಧಾಶ್ರೀ ಕಲಾವಿದೆರ್ ಕೈಕಂಬ ಕುಡ್ಲ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಅದ್ಧೂರಿ ರಂಗ ವಿನ್ಯಾಸದೊಂದಿಗೆ ವಿಭಿನ್ನ ಶೈಲಿಯಲ್ಲಿ ಭಕ್ತಿಪ್ರಧಾನ ಕನ್ನಡ ನಾಟಕ ಶ್ರೀ ಸರ್ವಜ್ಞ ಬಬ್ಬು ಸ್ವಾಮಿ ನಾಟಕ ಪ್ರದರ್ಶನಗೊಂಡಿತು. ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ ವಾರ್ಷಿಕ ಭಜನಾ
ಮಂಗಲೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯ ಚಂದ್ರ ಆಚಾರ್ಯ ಸಾಸ್ತಾನ ಇವರನ್ನು
ಸನ್ಮಾನಿಸಲಾಯಿತು. ಶ್ರೀ ಮಾಲತಿದೇವಿ ದೇವಸ್ಥಾನ ಕಚ್ಚೂರು ಧರ್ಮದರ್ಶಿ ಬಾರ್ಕೂರು ಗೋಕುಲದಾಸ್ ಬಾರ್ಕೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು.














Leave a Reply