
ಕೋಟ: ಶ್ರೀ ಮಾಣಿ ಚನ್ನಕೇಶವ ದೇವಸ್ಥಾನ ಗುಂಡ್ಮಿ ಇದರ 2025ನೇ ಸಾಲಿನ ಶ್ರೀದೇವರ ಬ್ರಹ್ಮರಥೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಶನಿವಾರ ದೇವಳದ ವಠಾರದಲ್ಲಿ ಊರಹತ್ತು ಸಮಸ್ತರ ಉಪಸ್ಥಿತಿಯಲ್ಲಿ
ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ
ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ ಹೊಳ್ಳ ವಹಿಸಿದ್ದರು.
ಸಭೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲರ
ಸಹಕಾರದಿಂದ ವಿಜೃಂಭಣೆಯಿoದ ಬ್ರಹ್ಮರಥೋತ್ಸವನ್ನು ಆಚರಿಸುವುದೆಂದು ತೀರ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ರತ್ನಾಕರಯ್ಯ ದೊಡ್ಮನೆ ಗುಂಡ್ಮಿ ಮತ್ತು ಮಾಜಿ ಟ್ರಸ್ಟಿ ವೇ|ಮೂ ಚಂದ್ರಶೇಖರ ಉಪಾಧ್ಯ,ಗುಂಡ್ಮಿ ಇವರ ಗೌರವ ಉಪಸ್ಥಿತಿಯಲ್ಲಿ ದಿನಾಂಕ ಎಪ್ರಿಲ್ 12 ರಂದು ನಡೆಯುವ ವಾರ್ಷಿಕ ಬ್ರಹ್ಮರಥೋತ್ಸವ
ಮತ್ತು ಮಾರ್ಚ 13 ರಂದು ನಡೆಯುವ ವಾರ್ಷಿಕ
ಮಾರಿಪೂಜೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ದೇವಳದ ಪ್ರಧಾನ ಅರ್ಚಕರಾದ ಅನಂತರಾಮ
ಬಾಯರಿ , ಉಪಾದಿವಂತರು, ಪರಿಚಾರಿಕ ವರ್ಗದವರು,
ರಥಬೀದಿ ಗೆಳೆಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು. ದೇಗುಲದ ಮಾಜಿ ಟ್ರಸ್ಟಿ
ಶ್ರೀಧರ ಶಾಸ್ತ್ರೀ ಗುಂಡ್ಮಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮಾಣಿ ಚನ್ನಕೇಶವ ದೇವಸ್ಥಾನ ಬ್ರಹ್ಮರಥೋತ್ಸವದ ಪೂರ್ವಭಾವಿ ಸಭೆ ಶನಿವಾರ ಶ್ರೀ ದೇಗುಲದಲ್ಲಿ ಜರಗಿತು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ ಹೊಳ್ಳ , ಗ್ರಾಮದ ಹಿರಿಯರಾದ ರತ್ನಾಕರಯ್ಯ ದೊಡ್ಮನೆ ಗುಂಡ್ಮಿ
ಮತ್ತು ಮಾಜಿ ಟ್ರಸ್ಟಿ ವೇ|ಮೂ ಚಂದ್ರಶೇಖರ ಉಪಾಧ್ಯ, ಗುoಡ್ಮಿ ಉಪಸ್ಥಿತರಿದ್ದರು.














Leave a Reply