Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾನವೀಯ ಸೇವೆಯೇ ರೆಡ್ ಕ್ರಾಸ್ ನ ಮೂಲತತ್ವ~ ಪ್ರೊ। ನಿಕೇತನ

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್ ನ ವಾರ್ಷಿಕ ಶಿಬಿರದ ಉದ್ಘಾಟನ ಕಾರ್ಯಕ್ರಮವು ದಿನಾಂಕ 21.02.202 5ರಂದು ನಡೆಯಿತು. ಮಾನವೀಯ ಸೇವೆಯ ಮೂಲಕ ಜನರ ಸೇವೆಯನ್ನು ಮಾಡುವುದು ರೆಡ್  ಕ್ರಾಸ್ ನ ಮುಖ್ಯ ಉದ್ದೇಶವಾಗಿದೆ. ಮಾನವೀಯತೆಯೇ ಶಾಂತಿ,  ಸ್ವಾತಂತ್ರ್ಯ ,ಐಕ್ಯತೆ, ರೆಡ್ ಕ್ರಾಸ್ ಪ್ರತಿಪಾದಿಸುವ ಮೂಲತತ್ವಗಳು.

ಈ ತತ್ವಗಳನ್ನು ಅರ್ಥಮಾಡಿಕೊಂಡು ಸ್ವಯಂ ಸೇವಕರು ರೆಡ್ ಕ್ರಾಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ.ಈ ಶಿಬಿರವು ಸ್ವಯಂ ಸೇವಕರಿಕೆ ಮನವರಿಕೆ ಮಾಡುವ ಕಾರ್ಯವನ್ನು ಮಾಡಬೇಕೆಂದು ಡಾ। ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ। ನಿಕೇತನ ಇವರು ಹೇಳಿದರು.

ಮಹಾತ್ಮ  ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ।.ದೇವಿದಾಸ್ ಎಸ್.ನಾಯ್ಕ ಇವರು ಅಧ್ಯಕ್ಷತೆ ವಹಿಸಿ ಸಹಬಾಳ್ವೆ, ಮಾನವೀಯತೆ ಹಾಗೂ ಸೇವೆಯ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್  ಶ್ರೀ ಬಿ.ಪಿ ವರದರಾಯ್ ಪೈ. ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ ಕಾರಂತ.ಶ್ರೀಮತಿ ಕೆ.ಬೇಬಿ, ಶ್ರೀಮತಿ ಗೀತಾ ಬಾಳಿಗ, ಡಾ। ಮಲ್ಲಿಕಾ ಎ ಶೆಟ್ಟಿ  ,ರೆಡ್ ಕ್ರಾಸ್ ಯೋಜನಾಧಿಕಾರಿ ಕು। ದೀಪಿಕಾ ಉಪಸ್ಥಿತರಿದ್ದರು .ಪ್ರಜ್ಞಾ ಸ್ವಾಗತಿಸಿದರು. ಪುಣ್ಯ ವಂದನಾರ್ಪಣೆಗೈದರು,  ದಿಶಾ ನಿರೂಪಿಸಿದರು.

Leave a Reply

Your email address will not be published. Required fields are marked *