
ಕೊಲ್ಲೂರು: ದಿನಾಂಕ :04-03-202 ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಕಂದಾಯ ನಿರೀಕ್ಷಕರಾದ ರಾಘವೇಂದ್ರ ಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿರುವ ರಾಘವೇಂದ್ರ ಡಿ ಅವರಿಗೆ ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಮಂಜುಳ ಎಂಬುವವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ರಾಘವೇಂದ್ರ ಡಿ ಅವರು ದಿನಾಂಕ 23/12/2024 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಮಂಜುಳ ರವರು ಅವರ ಪಟ್ಟಾ ಜಾಗ ಸರ್ವೆ ನಂಬ್ರ 56/11 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡು ಅನುಮತಿ ಪಡೆದ ಜಾಗದಲ್ಲಿ ಮನೆ ಕಟ್ಟದೇ ಹತ್ತಿರದ ಸರ್ವೆ ನಂಬ್ರ 141/ * ರಲ್ಲಿ 0.05 ಸರಕಾರಿ ಜಾಗದಲ್ಲಿ ಇಡೂರು ಪಂಚಾಯತ್ ಸದಸ್ಯ ಅಶೋಕ ಶೆಟ್ಟಿರವರ ಮುಖೇನ ಮನೆ ಕಟ್ಟುತ್ತಿದ್ದು, ಮಾನ್ಯ ತಹಸೀಲ್ದಾರ ಕುಂದಾಪುರ ಇವರು ಮನೆ ಕಾಮಗಾರಿ ನಿಲ್ಲಿಸುವಂತೆ ನೋಟೀಸ್ ನೀಡಿದ್ದರು ಕೂಡ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ರಾಘವೇಂದ್ರ ಡಿ ರವರು ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದು ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಮಂಜುಳ ಎಂಬುವವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪಿರ್ಯಾದಿದಾರರು ದಿನಾಂಕ 23/12/2024 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿ ಮಂಜುಳ ರವರು ಅವರ ಪಟ್ಟಾ ಜಾಗ ಸರ್ವೆ ನಂಬ್ರ 56/11 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡು ಅನುಮತಿ ಪಡೆದ ಜಾಗದಲ್ಲಿ ಮನೆ ಕಟ್ಟದೇ ಹತ್ತಿರದ ಸರ್ವೆ ನಂಬ್ರ 141/ * ರಲ್ಲಿ 0.05 ಸರಕಾರಿ ಜಾಗದಲ್ಲಿ ಕಟ್ಟುತ್ತಿರುವುದಾಗಿದೆ. ಬಳಿಕ ಮಾನ್ಯ ತಹಸೀಲ್ದಾರರು ಕುಂದಾಪುರ ಇವರು ಮನೆ ಕಾಮಗಾರಿ ನಿಲ್ಲಿಸುವಂತೆ ನೋಟೀಸ್ ನೀಡಿದ್ದು, ನೊಟೀಸ್ ನೀಡಿದ ಹೊರತಾಗಿಯೂ ಮಂಜುಳ ರವರು ಮನೆ ಕಾಮಗಾರಿಯನ್ನು ಅಶೋಕರವರ ಮುಖೇನ ಮುಂದುವರಿಸಿರುತ್ತಾರೆ. ಮಂಜುಳ ರವರು ಮನೆ ಕಟ್ಟುತ್ತಿರುವ ಜಾಗವು ಸರಕಾರಿ ಜಾಗ ಆಗಿರುವುದರಿಂದ ಸರಕಾರಿ ಜಾಗ ಅಕ್ರಮಣ ಮಾಡಿ ಮನೆ ಕಟ್ಟಿಸುತ್ತಿರುವ ಮಂಜುಳ ರವರ ವಿರುದ್ದ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2025 ಕಲಂ: 192 (A) KARNATAKA LAND REVENUE (AMENDMENT) ACT ರಂತೆ ಪ್ರಕರಣ ದಾಖಲಾಗಿರುತ್ತದೆ.
Leave a Reply