
ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ತಾಂಡಾದ ಒಂದು ಬಡ ಕುಟುಂಬದ ಗುಡಿಸಲು ಸುಟ್ಟು ಅಪಾರ ನಷ್ಟವಾಗಿತ್ತು. ಸುದ್ದಿ ತಿಳಿದ ತಕ್ಷಣ ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ಅವರು ಸುಮಗ ಗ್ರಾಮಕ್ಕೆ ಬಂದರು, ಆದರೆ ದೂರದ ಜಮೀನಿಗೆ ಹೋಗಲು ಕಿರಿದಾದ ರಸ್ತೆಯಿರುವದರಿಂದ ಕಾರು ಬಿಟ್ಟು ಕಾರ್ಯಕರ್ತರೊಬ್ಬರ ಬುಲೆಟ್ ಬೈಕ್ ಮೇಲೆ ಹೋಗಿ ಹಾನಿಗೊಳಗಾದ ಕುಟುಂಬಕ್ಕೆ ಸಾಂತ್ವನ. ಹೇಳಿ , ಸರಕಾರದಿಂದ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಎಸಿ ಕಾರ್ ಬಿಟ್ಟು ಕೆಳಗೆ ಇಳಿಯದ ಇಂದಿನ ರಾಜಕಾರಣಿಗಳ ಮಧ್ಯೆ ಬೀಳಗಿ ಶಾಸಕ ಜೆಟಿಪಾಟೀಲ ಶಾಸಕರು ಈ ವಯ್ಯಸ್ಸಿನಲ್ಲಿ, ಬಿಸಿಲಿನಲ್ಲಿ ಬಡ ಜನರಿಗಾಗಿ ಬೈಕ್ ಮೇಲೆ ತೆರಳಿ ಸಾಂತ್ವನ ಹೇಳಿರುವದು ಪ್ರಶಂಶನೀಯ.!
Leave a Reply