ಉಡುಪಿ: ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ, ಕೊಪ್ಪಲಂಗಡಿ- ಕಾಪು ವತಿಯಿಂದ ಶ್ರೀ ಕ್ಷೇತ್ರ ಕಟೀಲು ದೇವಳಕ್ಕೆ 7ನೇ ವರ್ಷದ ಪಾದಯಾತ್ರೆಯು ಮಾ.9 ರಂದು ಜರುಗಿತು.
“ನಮ್ಮ ನಡಿಗೆ ಕಟೀಲಮ್ಮನ ಕಡೆ” ಎನ್ನುವ ಧ್ಯೇಯ ದೊಂದಿಗೆ ಆರಂಭ ಗೊಂಡ ಈ ಪಾದಯಾತ್ರೆಯಲ್ಲಿ
ಶ್ರೀ ವಾಸುದೇವ ಸ್ವಾಮಿ ದೇವಳದ ಅರ್ಚಕರಾದ ನಾಗರಾಜ್ ಭಟ್, ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಉದಯ ಶೆಟ್ಟಿ, ಅಧ್ಯಕ್ಷರಾದ ನಾಗೇಶ್ ಸುವರ್ಣ, ಕಾರ್ಯದರ್ಶಿ ಹರೀಶ್, ಭಜನಾ ಸಂಚಾಲಕರಾದ ಉಮೇಶ್ ಪೂಜಾರಿ, ನಾರಾಯಣ ಶೆಟ್ಟಿ, ರಘುರಾಮ್ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ಅನಿಲ್ ಶೆಟ್ಟಿ, ರವಿ, ಗಣಪತಿ ನಾಯಕ್ ಅಂಬಾಗಿಲು, ಶಂಕರ್, ಸಚಿನ್ ಪುತ್ರನ್, ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪದಾಧಿಕಾರಿ ರವಿ ಭಟ್ ಮಂದಾರ, ಪುರಸಭೆ ಸದಸ್ಯ ಅನಿಲ್ ಮುಂತಾದವರು ಉಪಸ್ಥಿತರಿದ್ದರು. ಈ ಪಾದಯಾತ್ರೆಯಲ್ಲಿ ಸುಮಾರು 300ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.

















Leave a Reply