ಕೋಟ: ಬಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸೇವೆಯನ್ನು ಮಾಡಿ ಜನಮನ್ನಣೆಗಳಿಸಿದ ಕೋಟದ ಕಲಾಪೀಠ ಸಂಸ್ಥೆಯು ಇದೀಗ ಇದೇ ತಿಂಗಳ 15ರ ಶನಿವಾರದಂದು ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಯಕ್ಷ ಉತ್ಸವವನ್ನು ಆಚರಿಸುತ್ತಿದೆ.
ಇದೇ ಸಂದರ್ಭದಲ್ಲಿ ಕಲಾವಿದನಾಗಿ ದೇಶ ವಿದೇಶದಲ್ಲಿಯೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ಮಾತ್ರವಲ್ಲದೆ ಯಕ್ಷಗಾನ ಗುರುಗಳಾಗಿ ದುಡಿದು ಸಾಕಷ್ಟು ಶಿಷ್ಯರನ್ನು ಯಕ್ಷ ಲೋಕಕ್ಕೆ ಸಮರ್ಪಿಸಿದ, ಮಂಜುನಾಥ ಕುಲಾಲ ಐರೋಡಿ ಇವರಿಗೆ ಯಕ್ಷ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಮುಖ್ಯ ಅಭ್ಯಾಗತರಾಗಿ ಹಿರಿಯರಾದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಿದ್ದಾಪುರದ ವೈದ್ಯರಾದ ಡಾ. ಜಗದೀಶ ಶೆಟ್ಟಿ, ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿಯಾದ ರಾಜಶೇಖರ ಹೆಬ್ಬಾರ್‌ರವರ ಉಪಸ್ಥಿತಿಯಲ್ಲಿ ನಡೆಯುವ ಈ ಪ್ರಶಸ್ತಿ ವಿತರಣಾ ಸಮಾರಂಭದ ನಂತರ ನರಸಿಂಹ ತುಂಗರ ನಿರ್ದೇಶನದಲ್ಲಿ ಕವಿ ಕಡಂದಲೆ ಬಿ. ರಾಮರಾವ್ ವಿರಚಿತ “ದ್ರೌಪದಿ ಪ್ರತಾಪ” ಎಂಬ ಆಖ್ಯಾನ ನಡೆಯಲಿಕ್ಕಿದೆ ಎಂದು ಪ್ರಕಟಣೆ ತಿಳಿಸಿದೆ.
















Leave a Reply