Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಲ್ಯಾಣೋತ್ಸವದಲ್ಲಿ ಸಮರ್ಪಣಾ ಮನೋಭಾವ ರಾರಾಜಿಸಲಿ- ಸಂಸದ ಕೋಟ
ಶ್ರೀನಿವಾಸ ಕಲ್ಯಾಣೋತ್ಸವ ಚಪ್ಪರ ಮುಹೂರ್ತದಲ್ಲಿಹೇಳಿಕೆ

ಕೋಟ: ಶ್ರೀನಿವಾಸ ಕಲ್ಯಾಣೋತ್ಸವ ಈ ಭಾಗದ ಬಹುದೊಡ್ಡ ಉತ್ಸವವಾಗಿ ಮೂಡಿಬರಲಿ ಆ ಮೂಲಕ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳಲಿ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನಿವಾರ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ಇದೇ ಬರುವ ಎಪ್ರಿಲ್ 1 ರಿಂದ 3ರ ತನಕ ನಡೆಯಲಿರುವ ಸಾರ್ವಜನಿಕ ಕಲ್ಯಾಣೋತ್ಸವ ಇದರ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಕಲ್ಯಾಣೋತ್ಸವದಲ್ಲಿ ಪ್ರತಿಯೊರ್ವರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವಂತ್ತಾಗಲಿ ಎಂದು ಆಶಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಸಮಿತಿಯ ಕೋಶಾಧಿಕಾರಿ ಸತ್ಯನಾರಾಯಣ ಚಡಗ,ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ,ಸಮಿತಿಯ ಪ್ರಮುಖರಾದ ಸುಲತಾ ಹೆಗ್ಡೆ,ಜ್ಯೋತಿ ಉದಯ್ ಕುಮಾರ್,ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ಗಣೇಶ್ ಪೂಜಾರಿ, ಮಲ್ಲಿಕಾ ಬಾಲಕೃಷ್ಣ, ಪ್ರಭಾಕರ್ ಮೆಂಡನ್, ದೇವದಾಸ್ ಸಾಲಿಯಾನ್, ಲಿಲಾವತಿ ಗಂಗಾಧರ್, ಪ್ರಶಾಂತ್ ಶೆಟ್ಟಿ, ವಿಜಯ ಪೂಜಾರಿ, ಜಯೇಂದ್ರ ಪೂಜಾರಿ, ಮನೋಹರ್ ಪೂಜಾರಿ, ಮನೋಜ್ ಕುಮಾರ್, ಸುಜಾತ ಬಾಯರಿ, ಸತೀಶ್ ಪೂಜಾರಿ, ಸುಬ್ರಾಯ ಆಚಾರ್, ಶಂಕರ್ ಪೂಜಾರಿ ಪಾತ್ರಿಗಳು, ಗಣಪಯ್ಯ ಆಚಾರ್, ಕರುಣಾಕರ ಪೂಜಾರಿ, ಮಾಧವ ಕಾರ್ಕಡ, ಸಂದೀಪ ಕುಂದರ್ ಕೋಡಿ, ಸಿದ್ಧಿ ಶ್ರೀನಿವಾಸ ಪೂಜಾರಿ, ಜಯಂತಿ ಪೂಜಾರಿ, ಸಮಿತಿಯ ಗೌರವ ಸಲಹೆಗಾರರಾದ ವಿಜಯ ಮಂಜರ್ ಸ್ವಾಗತಿಸಿದರು.

ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಜಿ.ಚೆಲ್ಲಮಕ್ಕಿ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ವಂದಿಸಿದರು. ಧಾರ್ಮಿಕ ವಿಧಿವಿಧಾನವನ್ನು ಪ್ರಸನ್ನ ತುಂಗ ನೆರವೆರಿಸಿದರು.

ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ಇದೇ ಬರುವ ಎಪ್ರಿಲ್ 1 ರಿಂದ 3ರ ತನಕ ನಡೆಯಲಿರುವ ಸಾರ್ವಜನಿಕ ಕಲ್ಯಾಣೋತ್ಸವ ಇದರ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾದರು. ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಸಮಿತಿಯ ಕೋಶಾಧಿಕಾರಿ ಸತ್ಯನಾರಾಯಣ ಚಡಗ, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ , ಸಮಿತಿಯ ಪ್ರಮುಖರಾದ ಸುಲತಾ ಹೆಗ್ಡೆ,ಜ್ಯೋತಿ ಉದಯ್ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *