ಕೋಟ: ಇಲ್ಲಿನ ಕೋಟದ ಕದ್ರಿಕಟ್ಟು ಗ್ರಾಮದ ಹತ್ತು ಸಮಸ್ತರ ವತಿಯಿಂದ ಪ್ರತಿ ವರ್ಷ ನಡೆಸಲ್ಪಡುವ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹರಕೆಯ ಸೇವೆಯಾಟದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ,ಗಣಹೋಮ, ಮಹಾಗಣಪತಿ ಪೂಜಾ ಕಾರ್ಯಕ್ರಮ ಭಾನುವಾರ ಕದ್ರಿಕಟ್ಟು ಪರಿಸರದಲ್ಲಿ ಜರಗಿತು.
ವೇ.ಮೂರ್ತಿ ಸುಬ್ರಹ್ಮಣ್ಯ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಸಿದರು. ಈ ಹಿನ್ನಲ್ಲೆಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭದಲ್ಲಿ ಗ್ರಾಮದ ಗ್ರಾಮಸ್ಥರು, ಗಣ್ಯರು ಮತ್ತಿತರರು ಉಪಸ್ಥಿತರಿದ್ದರು. ಪಾಪಣ್ಣ ವಿಜಯ ಗುಣ ಸುಂದರಿ, ರೇಣುಕಾ ದೇವಿ ಮಹಾತ್ಮೆ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಜರಗಿತು. ಕೋಟ ಕದ್ರಿಕಟ್ಟು ಗ್ರಾಮದ ಯಕ್ಷಗಾನಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಹೋಮ ಕಾರ್ಯಕ್ರಮ ಜರಗಿತು.
















Leave a Reply