ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆ ಅರಮ ದೇಗುಲದ ಸನಿಹದಲ್ಲಿ ಆಕಸ್ಮಿಕ ಬೆಂಕಿ ಅವಗಡಕ್ಕೆ ಕೋಡಿ ಸಂಪರ್ಕಿಸುವ ಅರ್ಧ ಕೀ.ಮಿ ರಸ್ತೆಯ ಆಸುಪಾಸು ವ್ಯಾಪ್ತಿ ಬೆಂಕಿಗಾಹುತಿ ಪಡೆದಿದೆ.
ಈ ಹಿನ್ನಲ್ಲೆಯಲ್ಲಿ ಸ್ಥಳದಲ್ಲಿ ಮೆಸ್ಕಾಂ ವಿದ್ಯುತ್ ಪರಿವರ್ತಕ ಸುತ್ತ ಮುತ್ತ ಬೆಂಕಿಗಾಹುತಿ ಪಡೆದಿದ್ದು ಅಲ್ಲೆ ಸಂಚರಿಸುತ್ತಿದ್ದ ಗ್ರಾಮಪಂಚಾಯತ್ ಪ್ರತಿನಿಧಿ ರವೀಂದ್ರ ತಿಂಗಳಾಯ ಅಗ್ನಿ ಶಾಮಕ ದಳಕ್ಕೆ ಹಾಗೂ ಮೆಸ್ಕಾಂ ಮಾಹಿತಿ ನೀಡಿ ಬಾರಿ ಅನಾಹುತವನ್ನು ತಪಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಿಂತಿರುಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಮೆಸ್ಕಾಂ ಗಂಭೀರವಾಗಿ ಪರಿಗಣಿದ ಹಿನ್ನಲ್ಲೆಯಲ್ಲಿ ಗ್ರಾಮಸ್ಥರು ಹಾಗೂ ಕುಂದಾಪುರದ ಅಗ್ನಿಶಾಮಕ ದಳ ಬೆಂಕಿ ನಂದಿವಲ್ಲಿ ಕೈಜೋಡಿಸಿತು.

















Leave a Reply