
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಇವರ ಆಶ್ರಯ ದಲ್ಲಿ UKG ಯ “ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಎಸ್. ಎಮ್. ಎಸ್ ಕಾಲೇಜ್ ನ ನಿವೃತ್ತ ಪ್ರಾಂಶು ಪಾಲರಾದ ಶ್ರೀಮತಿ ಸುಶೀಲಾ.ಆರ್. ರೈ ರವರು ದೀಪ ಬೆಳಗಿ , ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ” ವಿದ್ಯೆಯ ಜೊತೆ ಜೊತೆಗೆ ಸುಸಂಸ್ಕೃತ ಜೀವನ ತಮ್ಮ ದಾಗಿಸಿ ಕೊಳ್ಳಿ, ಕಲಿಕೆ ಯಲ್ಲಿನ ಮೊದಲ ಹೆಜ್ಜೆಗೆ ಶುಭಾಶಯಗಳು ” ಎಂದು ತಮ್ಮ ಮಾತು ಗಳನ್ನಾಡಿದರು.
ಈ ಕಾರ್ಯಕ್ರಮದ ಸಭಾ ಅಧ್ಯಕ್ಷತೆ ವಹಿಸಿದ ಶಾಲೆಯ ಸಂಚಾಲಕರಾದ ಶ್ರೀ ರಾಜ್ ರಾಮ್ ಶೆಟ್ಟಿ ರವರು ” ನಾವು ಕಲಿತ ವಿದ್ಯೆ ನಮಗೆ ಗೌರವ ತಂದು ಕೊಡುತ್ತದೆ. ಅದನ್ನು ಪಡೆದುಕೊಂಡು ಸುಸಂಸ್ಕೃತ ರಾಗಿ ಜ್ಞಾನಾರ್ಜನೆ ಬೆಳೆಸಿ ಕೊಳ್ಳಿ ” ಎಂದು ತಮ್ಮ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥ ರಾದ ಶ್ರೀಮತಿ ಲಿಖಿತಾ ಕೊಠಾರಿ ರವರು ಈ ಶಾಲೆ ಉತ್ತಮ ವಾದ ಸೌಲಭ್ಯ ಗಳನ್ನೆಲ್ಲಾ ಹೊಂದಿದ್ದು , ಶೈಕ್ಷಣಿಕ ವಾಗಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಗಳಿಗೋಸ್ಕರ ಮತ್ತಷ್ಟು ಸೌಲಭ್ಯ ಒದಗಿಸಿ ಶಿಕ್ಷಣ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ” ಎಂದು ತಮ್ಮ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಕ್ಷಕ -ಶಿಕ್ಷಕ ಸಂಘದ ಸದಸ್ಯರಾದ ಶ್ರೀಸತೀಶ ಕುಲಾಲ ಉಪಸ್ಥಿತರಿದ್ದರು.
UKG ಪುಟಾಣಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ, ಮತ್ತು ತರಗತಿಯಲ್ಲಿ ಕಳೆದ ಕ್ಷಣವನ್ನು ಮೆಲುಕು ಹಾಕಿದರು. ಶಾಲೆಯ ಶಿಕ್ಷಕಿ ಶ್ರೀಮತಿ ಅಮೃತಾ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ರಕ್ಷಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಶ್ರೀಮತಿ ಅಪರ್ಣಭಟ್ ವಂದಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಶುಭ ರಾವ್,ಶ್ರೀಮತಿ ಚಂದ್ರಕಲಾ. ಶ್ರೀಮತಿ ಕುಸುಮ ಕಾರ್ಯಕ್ರಮ ಸಂಯೋಜನೆ ಮಾಡಿದರು. ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.
Leave a Reply