
ಕೋಟ; ದೇವತಾರಾಧನೆಯ ಮೂಲ ಉದ್ದೇಶವನಿಟ್ಟುಕೊಂಡು ಹುಟ್ಟಿದ ಕಲೆ ಯಕ್ಷಗಾನ. ಕಾಳಗ, ಕಲ್ಯಾಣ ಯಾವ ಪ್ರಸಂಗವಾದರೂ ಸುಸಂಸ್ಕೃತ ತತ್ವವನ್ನು ಪ್ರತಿಪಾದಿಸುವ ಕಥೆಗಳನ್ನೊಳಗೊಂಡಿರುತ್ತದೆ. ಯಕ್ಷಗಾನ. ರಾಮಾಯಣ, ಮಹಾಭಾರತ ಮತ್ತು ಭಾಗವತ ಕಥೆಗಳು ಎಂದೆoದಿಗೂ ಸಮಾಜದ ಕ್ಷೇಮಕ್ಕೆ ಅಗತ್ಯವಾದ ವಿಚಾರವನ್ನು ಹೊಂದಿದoತವುಗಳು. ಈ ನಿಟ್ಟಿನ ಉದ್ದೇಶವನ್ನು ಹೊಂದಿ ಮಯ್ಯ ಯಕ್ಷ ಬಳಗ ಹಾಲಾಡಿ ಹಮ್ಮಿಕೊಂಡ ಈ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಲೆಂದು ಹಾರೈಸುತ್ತೇನೆಂದು ಸಾಲಿಗ್ರಾಮ ದೇವಸ್ಥಾನದ ಟ್ರಸ್ಟಿ ವೇದಮೂರ್ತಿ ಗುಂಡ್ಮಿ ಚಂದ್ರಶೇಖರ ಉಪಾಧ್ಯ ಆಶೀರ್ವದಿಸಿದರು.
ಅವರು ಇತ್ತೀಚಿಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಗುಂಡ್ಮಿ ಇಲ್ಲಿ ಮಯ್ಯ ಯಕ್ಷ ಬಳಗ ಹಾಲಾಡಿ, ಕನ್ನಡ ಮತ್ತು ಸಂಸ್ಕçತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಆಯೋಜಿಸಿದ್ದ ಯಕ್ಷ ಸಂಭ್ರಮದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ, ಮಯ್ಯ ಯಕ್ಷ ಬಳಗದ ರಾಘವೇಂದ್ರ ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ರಾಮಚಂದ್ರ ಐತಾಳ, ನಿವೃತ್ತ ಮುಖ್ಯೋಪಾದ್ಯಾಯ ಹರಿಕೃಷ್ಣ ಹೊಳ್ಳ ಉಪಸ್ಥಿತರಿದ್ದರು. ಬೇಳೂರು ವಿಷ್ಣುಮೂರ್ತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ವೈಕುಂಠ ಹೇರ್ಳೆ ಕೃತಜ್ಞತೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಕಲಾವಿದರಿಂದ “ ಭೀಷ್ಮ ವಿಜಯ ” ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಇತ್ತೀಚಿಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಗುಂಡ್ಮಿ ಇಲ್ಲಿ ಮಯ್ಯ ಯಕ್ಷ ಬಳಗ ಹಾಲಾಡಿ, ಕನ್ನಡ ಮತ್ತು ಸಂಸ್ಕçತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಆಯೋಜಿಸಿದ್ದ ಯಕ್ಷ ಸಂಭ್ರಮದಲ್ಲಿ ಸಾಲಿಗ್ರಾಮ ದೇವಸ್ಥಾನದ ಟ್ರಸ್ಟಿ ವೇದಮೂರ್ತಿ ಗುಂಡ್ಮಿ ಚಂದ್ರಶೇಖರ ಉಪಾಧ್ಯ ಮಾತನಾಡಿದರು. ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ, ಮಯ್ಯ ಯಕ್ಷ ಬಳಗದ ರಾಘವೇಂದ್ರ ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ರಾಮಚಂದ್ರ ಐತಾಳ, ನಿವೃತ್ತ ಮುಖ್ಯೋಪಾದ್ಯಾಯ ಹರಿಕೃಷ್ಣ ಹೊಳ್ಳ ಉಪಸ್ಥಿತರಿದ್ದರು.
Leave a Reply