Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಮುದ್ಯತಾ ಸಂಸ್ಥೆ ಉದ್ಯಮ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು- ಆನಂದ್ ಸಿ ಕುಂದರ್

ಕೋಟ: ಎಂಟನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಮುದ್ಯತಾ ಸಂಸ್ಥೆ ಇದೀಗ ಸೀ ಶೋರ್ ಬೀಚ್ ರೆಸಾರ್ಟ್ ಮೂಲಕ ಹೊಸ ಅವಕಾಶಗಳನ್ನು ಪ್ರವಾಸಿಗರಿಗೆ ಮತ್ತು
ಆಹಾರ ಪ್ರಿಯರಿಗೆ ಒದಗಿಸಿ ಕೊಡುತ್ತಿರುವುದಲ್ಲದೆ ಉದ್ಯಮ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಉದ್ಯಮಿ ಆನಂದ ಸಿ ಕುಂದರ್ ಹೇಳಿದರು.

ಅವರು ಕುಂಭಾಶಿಯ ಕೊರವಡಿ ಕಡಲ ಕಿನಾರೆಯಲ್ಲಿ ಸಮುದ್ಯತಾ ಸಂಸ್ಥೆ ನೂತನವಾಗಿ ಆರಂಭಿಸಿದ ಸಮುದ್ಯತಾ ಸೀಶೋರ್ ಬೀಚ್ ರೇಸಾರ್ಟ್ನ್ನು ಭಾನುವಾರ
ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮುದ್ಯತಾ ಸಂಸ್ಥೆಯ ಯಶಸ್ಸಿಗೆ ಯೋಗೇಂದ್ರ ತಿಂಗಳಾಯ ಅವರ ತಂಡ ನಡೆದು ಬಂದ ದಾರಿಯನ್ನ
ನೆನಪಿಟ್ಟುಕೊಂಡು ಮುoದುವರಿಯುತ್ತಿರುವುದೇ ಕಾರಣ.
ಆಧುನಿಕ ಜನರ ಅಭಿಲಾಷೆಗೆ ತಕ್ಕಂತೆ ಓಪನ್ ಲಾನ್ ಕಾಟೇಜ್‌ಗಳು, ವಿವಿಧ ಒಳಾಂಗಣ ಕ್ರೀಡೆಗಳು, ಸಂಸ್ಕöತಿಯ ಪ್ರತೀಕವಾಗಿ ನಿರ್ಮಿಸಲಾದ ತೊಟ್ಟಿ ಮನೆ
ಮೊದಲಾದವುಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮತ್ತು ಸಂತೃಪ್ತಿಗೊಳಿಸುವಲ್ಲಿ ಯಶಸ್ವಿಯಾಗಲಿದೆ
ಎಂದರು.

ಬ್ರಹ್ಮಾವರದ ಚಾರ್ಟೆಡ್ ಅಕೌಂಟೆಟ್ ಪದ್ಮನಾಭ ಕಾಂಚನ್, ಬಂಗೇರ ಓವರ್ಸೀಸ ಕಾರ್ಖಾನೆ ಮಾಲಿಕ ರಾಜೇಶ್ ಬಂಗೇರ, ಕೋಟೇಶ್ವರದ ಎಲ್‌ಜಿ ಇಂಡಸ್ಟಿçÃಸ್
ಸoಸ್ಥೆಯ ಮಾಲಕಿ ಹರ್ಷಾ ಕಾಮತ್,  ಮಂಗಳೂರಿನ ಕಾರು ಡೆಕೋ ಮಾಲಕ ಕುಶಲ್ ಹೆಗ್ಡೆ, ಕುಂಭಾಶಿ ಗ್ರಾಮ
ಪಂಚಾಯತ್ ಸದಸ್ಯ ರಾಘವೇಂದ್ರ ಮೊಗವೀರ, ಕೋಟ-ಪಡುಕೆರೆ ಉದ್ಯಮಿ ರಮೇಶ್ ಎಚ್ ಕುಂದರ್, ಸಮುದ್ಯತಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ
ತಿoಗಳಾಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಕಾಶ್ ಹೆಬ್ಬಾರ ಸ್ವಾಗತಿಸಿ ನಿರೂಪಿಸಿ
,ಸಂಸ್ಥೆಯ ಸದಸ್ಯ ಸಂದೀಪ್ ಶೆಟ್ಟಿ ವಂದಿಸಿದರು.

ಕುoದಾಪುರದಿoದ ಸುಮಾರು 10 ಕಿ.ಮೀ ದೂರದಲ್ಲಿರುವ ಕೊರವಡಿ ಬೀಚ್ ರಸ್ತೆಯಲ್ಲಿರುವ ಸೀಶೋರ್ ಇವೆಂಟ್, ಆಹಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದೆ. ರಾಷ್ಟಿçÃಯ ಹೆದ್ದಾರಿ 66 ರಲ್ಲಿ ಸಿಗುವ ತೆಕ್ಕಟ್ಟೆಯಿಂದ ಪಶ್ಚಿಮಕ್ಕೆ ಸುಮಾರು 3 ಕಿ.ಮೀ
ಸಮುದ್ರದ ಬದಿಗೆ ಸಂಚರಿಸಿದಾಗ ಹೊಸ ಇವೆಂಟ್ ಕಾಣಸಿಗುತ್ತದೆ. ಸಮುದ್ಯತಾ ಟಿ.ಎನ್.ಎನ್ ಸೂಟ್ಸ್ ವೆಂಕಟೇಶ್ ಸೀಶೋರ್ ಇವೆಂಟ್ ನಲ್ಲಿ ಸೌಪರ್ಣಿಕ,
ವಾರಾಹಿ, ಕೇದಕ, ಚಕ್ರ ಹಾಗೂ ಕುಬ್ಜ ಎಂಬ ಹೆಸರಿನ ಐದು ವಿಶೇಷ ರೀತಿಯ ಕೋಟೆಜುಗಳನ್ನು ಹೊಂದಿದೆ, ಇದಕ್ಕೆ ತಾಗಿಕೊಂಡೆ ವಿಶಾಲವಾದ ತೆರೆದ ಹುಲ್ಲುಗಾವಲಿನ ಮನೆ. ಜೊತೆಗೆ ರೈನ್ ಡಾನ್ಸ್, ಬೀನ್ ಬ್ಯಾಗ್ ಕಾನ್ಸೆಪ್ಟ್ ಸಿನಿಮಾ, ಓಪನ್ ಲಾನ್,  ಹಳೆಯ ಕಾಲದ ಸಂಸ್ಕತಿಯನ್ನು ಪ್ರತಿಬಿoಬಿಸುವ ತೊಟ್ಟಿ ಮನೆ, ಚದುರಂಗ
ಮುiತಾದ ಒಳಾಂಗಣ ಕ್ರೀಡೆಗಳು ಹಾಗೂ ಇನ್ನಿತರ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಮುದ್ಯತಾ ಸಂಸ್ಥೆ ಇದೀಗ ಸೀ ಶೋರ್ ಬೀಚ್ ರೇಸಾರ್ಟ್ನ್ನು ಕೋಟದ ಉದ್ಯಮಿ ಆನಂದ ಸಿ ಕುಂದರ್ ಉದ್ಘಾಟಿಸಿದರು. ಬ್ರಹ್ಮಾವರದ ಚಾರ್ಟೆಡ್ ಅಕೌಂಟೆAಟ್ ಪದ್ಮನಾಭ ಕಾಂಚನ್, ಬoಗೇರ ಓವರ್ಸೀಸ್ ಖಾರ್ಕಾನೆ ಮಾಲಿಕ ರಾಜೇಶ್ ಬಂಗೇರ, ಸಮುದ್ಯತಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *