ಕೋಟ: ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಶಿವರಾಯ ಸಪರಿವಾರ ಬನ್ನಾಡಿ ಇದರ ಜೀರ್ಣೋದ್ಧಾರ ಪುನಃ ಪ್ರತಿಷ್ಠೆ, ಕಾರ್ಯಕ್ರಮ ಎಪ್ರಿಲ್ 2ರಿಂದ 4ರ ತನಕ ಜರಗಲಿದೆ.
ಈ ಪ್ರಯುಕ್ತ ಎ.02ರ ಬುಧವಾರ ರಾತ್ರಿ 9.35ಕ್ಕೆ ಜೀರ್ಣೋದ್ದಾರ, ಪುನಃ ಪ್ರತಿಷ್ಠೆ, ಎ.3ರಂದು ಗುರುವಾರ ಬೆಳಿಗ್ಗೆ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಕಲಾತತ್ವ ಹೋಮಾದಿಗಳು ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ. ಎ.04ರ ಶುಕ್ರವಾರ ರಾತ್ರಿ ಗೆಂಡಸೇವೆ ಮತ್ತು ಶಿವರಾಯನ ಕೋಲ ಕಾರ್ಯಕ್ರಮಗಳು ಜರಗಲಿದೆ.ಎಂದು ಗರಡಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















Leave a Reply