Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ: ಪ್ರಸಾದ್ ನೇತ್ರಾಲಯದ ಅರೆ ವೈದ್ಯಕೀಯ ಕಾಲೇಜಿಗೆ 20 ಲಕ್ಷ ರೂಪಾಯಿ ವಂಚನೆ

ಉಡುಪಿ: ದಿನಾಂಕ:03-04-2025(ಹೊಸಕಿರಣ) ನಗರದ ಅರೆ ವೈದ್ಯಕೀಯ ಕಾಲೇಜೊಂದಕ್ಕೆ ಅನ್ಯ ರಾಜ್ಯದ ವ್ಯಕ್ತಿಯೋರ್ವ 20 ಲಕ್ಷ ರೂಪಾಯಿಗಳ ವರೆಗೆ ವಂಚನೆ ನಡೆಸಿದ್ದಾನೆ ಎಂದು ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ರಶ್ಮಿ ಎಂಬವರಿಗೆ ಸಂಬಂಧಿಸಿರುವ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ದಲ್ಲಿ ನೇತ್ರಾಜ್ಯೋತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಮತ್ತು ನೇತ್ರಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಎಂಬ ಎರಡು ಅರೆ ವೈದ್ಯಕೀಯ ಕಾಲೇಜುಗಳು 2016 ರಿಂದ ಕಾರ್ಯಚರಿಸುತ್ತಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಸಾಕಷ್ಟು ಪ್ರಚಾರವನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೀಡಿರುತ್ತಾರೆ ಎಂದಿದ್ದಾರೆ.ಈ ವಿಚಾರವನ್ನು ಅರಿತ ಆಪಾದಿತ ಮಣಿಪುರ ರಾಜ್ಯದ ಕೇಶಮ್ ವಿಕ್ರಮ್ ಸಿಂಗ್ ಎಂಬವನು ರಶ್ಮಿರವರಿಗೆ ವಾಟ್ಸ್ ಆಪ್ ಕರೆ ಮಾಡಿ ತನ್ನ ರಾಜ್ಯದಲ್ಲಿ ಅರೆ ವೈದ್ಯಕೀಯ ಶಿಕ್ಷಣಕ್ಕೆ ಸಿದ್ಧರಿರುವ ಸಾವಿರಾರು ವಿಧ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ, ಈ ವರ್ಷ 268 ವಿದ್ಯಾರ್ಥಿಗಳನ್ನು ಕರೆ ತಂದು ರಶ್ಮಿರವರ ಸಂಸ್ಥೆಗೆ ದಾಖಲು ಮಾಡುತ್ತೇನೆ ಎಂದು ನಂಬಿಸಿದ್ದಾನೆ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳನ್ನು ಕರೆ ತರಲು ಟ್ರೈನ್ ಹಾಗೂ ವಿಮಾನಕ್ಕೆ ತಗಲುವ ಖರ್ಚುಗಳನ್ನು ರಶ್ಮಿರವರ ಸಂಸ್ಥೆಯಿಂದಲೆ ಚಾರಿಟೇಬಲ್‌ ಟ್ರಸ್ಟ್, ಪ್ರಸಾದ್ ನೇತ್ರಾಲಯ ದಲ್ಲಿ ನೇತ್ರಾಜ್ಯೋತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಮತ್ತು ನೇತ್ರಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಎಂಬ ಎರಡು ಅರೆ ವೈದ್ಯಕೀಯ ಕಾಲೇಜುಗಳು 2016 ರಿಂದ ಕಾರ್ಯಚರಿಸುತ್ತಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಕರೆ ತರಲು ಟ್ರೈನ್ ಹಾಗೂ ವಿಮಾನಕ್ಕೆ ತಗಲುವ ಖರ್ಚುಗಳನ್ನು ರಶ್ಮಿರವರ ಸಂಸ್ಥೆಯಿಂದಲೆ ನೀಡಬೇಕಾಗುತ್ತದೆ ಎಂದು ತಿಳಿಸಿ, ರಶ್ಮಿರವರನ್ನು ನಂಬಿಸಿ 2 19/09/2024 80 2 24/01/2025 ಹಂತ ಹಂತವಾಗಿ 19,56,138/- ರೂಪಾಯಿ ಹಣವನ್ನು ಪಡೆದು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡದೇ ಮೋಸ ಮತ್ತು ವಂಚನೆ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ) ಐ.ಟಿ. ಆಕ್ಟ್., 318(4) BNS ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *