
ಕೋಟ: ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ತೃತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವರ್ಷೋತ್ಸವದ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಎ.6ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಿ ಕನ್ಯಾಣ ಇಲ್ಲಿ ಜರಗಿತು. ಸುಮಾರು 125ಕ್ಕೂ ಅಧಿಕ ಮಂದಿ ಈ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಪುನೀತ್ ಪೂಜಾರಿ ಅಧ್ಯಕ್ಷತೆಯಲ್ಲಿ ರಕ್ತದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಉಡುಪಿ ಕಿನರಾ ಮೀನು ಉತ್ಪಾದಕ ಸಂಘದ ನಿರ್ದೇಶಕ ಸುದೀನ್ ಪೂಜಾರಿ ,ಶ್ರೀ ಮಾರಿಕಾಂಬಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಮಾಸ್ಟರ್ , ಜಿಲ್ಲಾಸ್ಪತ್ರೆಯ ವೈದ್ಯರಾಸ ಡಾ. ಅಶೋಕ್ ಹೆಚ್ , ರಕ್ತನಿಧಿ ವಿಭಾಗದ ಅಧಿಕಾರಿ ಡಾ. ವೀಣಾ ಕುಮಾರಿ ,ಶಿಕ್ಷಕರಾದ ವಿಜಯ್ ನಾಯಿರಿ ,ಶ್ರೀರಾಮ ಗೆಳೆಯರ ಬಳಗದ ಪ್ರದಾನ ಕಾರ್ಯದರ್ಶಿ ಅಕ್ಷಿತ್ ಪೂಜಾರಿ ,ಉಪಾಧ್ಯಕ್ಷ ಯಾದವ್ ಕರ್ಕೇರ ,ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕೋಡಿ ಕನ್ಯಾಣದಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ರಕ್ತದಾನ ಶಿಬಿರ ಜರಗಿತು. ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಪುನೀತ್ ಪೂಜಾರಿ, ಉಡುಪಿ ಕಿನರಾ ಮೀನು ಉತ್ಪಾದಕ ಸಂಘದ ನಿರ್ದೇಶಕ ಸುದೀನ್ ಪೂಜಾರಿ ,ಶ್ರೀ ಮಾರಿಕಾಂಬಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಮಾಸ್ಟರ್ ಮತ್ತಿತರರು ಇದ್ದರು.
Leave a Reply