
ಕೋಟ: ಇಲ್ಲಿನ ಕೋಡಿ ಕನ್ಯಾಣದ ಶ್ರೀರಾಮ ಮಂದಿರದ ವತಿಯಿಂದ ಶ್ರೀರಾಮ ನವಮಿ ಆಚರಣೆ ವಿವಿಧ ಪೂಜಾ ಕಾರ್ಯದ ಮೂಲಕ ಚಾಲನೆಗೊಂಡಿತು..ಈ ಹಿನ್ನಲ್ಲೆಯಲ್ಲಿ ಸಾವಿರ ತುಳಸಿ ಅರ್ಚನೆ, ವಿವಿಧ ಭಜನಾ ತಂಡಗಳ ಅಖಂಡ ಭಜನಾ ಮಂಗಲೋತ್ಸವ ಕಾರ್ಯಕ್ರಮ ಸಂಪನ್ನಗೊoಡವು, ರoಗಪೂಜೆ ಕಾರ್ಯಕ್ರಮ ಜರಗಿದವು.
ಧಾರ್ಮಿಕ ವಿಧಿವಿಧಾನಗಳನ್ನು ದೇಗುಲದ ಪ್ರಧಾನ ಅರ್ಚಕ ಭಾಸ್ಕರ್ ಬಾಯರಿ ನೆರವೆರಿಸಿದರು. ಮಂದಿರದ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ, ದೇಗುಲದ ಪ್ರಮುಖರಾದ ಜಯಕುಮಾರ್, ಸುರೇಶ್ ಕಾರ್ವಿ, ಮಹಾಬಲ ಕುಂದರ್ , ತಿಮ್ಮಪ್ಪ ಕರ್ಕೇರ, ಮಹೇಶ್ ತಿಂಗಳಾಯ, ಜಗನಾಥ್ ಅಮೀನ್, ರಾಘವೇಂದ್ರ ಸುವರ್ಣ, ರಾಮದಾಸ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿನ ಕೋಡಿ ಕನ್ಯಾಣದ ಶ್ರೀರಾಮ ಮಂದಿರದ ವತಿಯಿಂದ ಶ್ರೀರಾಮ ನವಮಿ ಆಚರಣೆಯ ಅಂಗವಾಗಿ ವಿವಿಧ ಭಜನಾ ತಂಡಗಳ ಅಖಂಡ ಭಜನಾ ಮಂಗಲೋತ್ಸವ ಕಾರ್ಯಕ್ರಮ ಸಂಪನ್ನಗೊoಡವು. ಮಂದಿರದ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ, ದೇಗುಲದ ಪ್ರಮುಖರಾದ ಜಯಕುಮಾರ್,ಸುರೇಶ್ ಕಾರ್ವಿ,ಮಹಾಬಲ ಕುಂದರ್ ಮತ್ತಿತರರು ಇದ್ದರು.
Leave a Reply