
ಕೋಟ: ಇತ್ತೀಚಿಗಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿ ಅವಲೋಕಿಸಿದರೆ ತುಂಬಾ ಬೇಸರ ನೀಡುವಂತ್ತದ್ದು ಅದರಲ್ಲೂ ಶತಮಾನ ಕಂಡ ಅದೆಷ್ಟೊ ಶಾಲೆಗಳು ತಮ್ಮ ಉಳಿವಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ, ಕಾರಂತರ ಮನೆತನದ ಶಾಂಭವಿ ಶಾಲೆ ಉಳಿಸಲು ಮಾಹೇ ಸಿದ್ಧವಿದೆ ಈ ಬಗ್ಗೆ ಮಾತುಕತೆ ನಡೆಸೋಣ ಎಂದು ಮಣಿಪಾಲ ಮಾಹೆ ಇದರ ಸಹಕುಲಪತಿ ಡಾ.ಎಚ್ ಎಸ್ ಬಲ್ಲಾಳ ನುಡಿದರು.
ಭಾನುವಾರ ಕೋಟದ ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರದ ಶಾಲೆಗಳನ್ನು ಗ್ರಾಮಸ್ಥರ ಹಾಗೂ ಹಿಂದಿನ ವಿದ್ಯಾರ್ಥಿ ಸಂಘದ ಸಹಕಾರ ಪಡೆದ ಅಭಿವೃದ್ಧಿಗೊಳಿಸಬೇಕು ಅದೇ ರೀತಿ ಶಾಂಭವೀ ಶಾಲೆ ಇತಿಹಾಸ ನೋಡಿದರೆ ಅತ್ಯದ್ಭುತ ಸಾಧನೆ ಹಿನ್ನೆಲೆ ಹೊಂದಿದೆ ಇಂಥಹ ಶಾಲೆ ಅವನತಿ ಹೊಂದಲು ಬಿಡಬಾರದು ನಾವೆಲ್ಲ ಒಟ್ಟಾಗಿ ಕೈಜೋಡಿಸಿ ಗೀತಾನಂದ ಫೌಂಡೇಶನ್ ಸಹಕಾರ ಪಡೆದು ಉಳಿಸೋಣ ಎಂದು ಶಾಲೆ ಅಭಿವೃದ್ಧಿ ಕುರಿತಂತೆ ನಮ್ಮ ಮಾಹೆಗೆ ಭೇಟಿ ನೀಡಿ ಚರ್ಚಿಸೋಣ ಎಂದರು .
ಈ ಸಂದರ್ಭದಲ್ಲಿ ಶಾಲೆಯಲ್ಲಿ ಹಿರಿಯ ಹಾಗೂ ಪ್ರಸ್ತುತ ಶಿಕ್ಷಕರು,ಗೌರವ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು. ಅದೇ ರೀತಿ ಹಿರಿಯ ತಲೆಮಾರಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ್ ವಹಿಸಿದ್ದರು. ಕುoದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನ ಕಾರ್ಯಕ್ರಮ ನೆರವೆರಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಉದ್ಯಮಿ ಸುರೇಶ್ ಪ್ರಭು,ರಮಾನಂದ ಶ್ಯಾನುಭಾಗ್,ಕೋಟ ಗ್ರಾ. ಪಂ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು. ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾನಂದ ಗಿಳಿಯಾರು ಶತನೋತ್ಸವ ಮುನ್ನೋಟದ ವರದಿ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ.ಅಧ್ಯಕ್ಷ ಕೆ.ರಾಜಾರಾಂ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಅತಿಥಿ ಶಿಕ್ಷಕರಾದ ವಿನೋದ ವಿಜಯ್, ಸರಿತಾ ಪ್ರಸಾದ್ ನಿರೂಪಿಸಿ ವಂದಿಸಿದರು. ನಂತನರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಪ್ರಹಸನ ವಿವಿಧ ಕಾರ್ಯಕ್ರಮಗಳು ಜರಗಿತು. ಕೋಟದ ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಿರಿಯ ತಲೆಮಾರಿನ ವಿದ್ಯಾರ್ಥಿಗಳಾದ ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಉದ್ಯಮಿ ಸುರೇಶ್ ಪ್ರಭು,ರಮಾನಂದ ಶ್ಯಾನುಭಾಗ್ ವಿಶೇಷವಾಗಿ ಸನ್ಮಾನಿಸಲಾಯಿತು.
Leave a Reply