
ಕೋಟ: ಇಲ್ಲಿನ ಮೂಡುಗಿಳಿಯಾರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಯೋಗಬನದಲ್ಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರ ಎ.7ರಂದು ಜರಗಿತು.
ಕಾರ್ಯಕ್ರಮವನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಉದ್ಘಾಟಿಸಿ ಆರೋಗ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಯೋಗಬನದ ಸಹಾಯಕ ನಿರ್ದೇಶಕ ಶ್ರೀ ಗಣೇಶ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ಎನ್‌ಎಸ್‌ಡಿ ವಿಭಾಗದ ಡಾ.ಯಶಶ್ರೀ ಶೆಟ್ಟಿ, ದಂತವೈದ್ಯೆ ಡಾ.ಅನಾಲಿನಿ, ಯೋಗಬನ ಸಹಾಯ ನಿರ್ದೇಶಕ ಶಣ್ಮುಖ ಕುತ್ಯಾಳ ಉಪಸ್ಥಿತರಿದ್ದರು. ಶಿಬಿರದಲ್ಲಿ ಮಧುಮೇಹ ತಪಾಸಣೆ, ಅಧಿಕ ರಕ್ತದೊತ್ತಡ ತಪಾಸಣೆ, ಕ್ಯಾನ್ಸರ್ ಸ್ಟೀನಿಂಗ್ ಪ್ರಯೋಜನಗಳು ಪಡೆದರು.
ಮೂಡುಗಿಳಿಯಾರಿನ ಸರ್ವಕ್ಷೇಮ ಯೋಗಬನದಲ್ಲಿ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಕಾರ್ಯಕ್ರಮವನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಉದ್ಘಾಟಿಸಿದರು. ಯೋಗಬನದ ಸಹಾಯಕ ನಿರ್ದೇಶಕ ಶ್ರೀ ಗಣೇಶ್, ಕೋಟ ಸಮುದಾಯ ಆರೋಗ್ಯ ಕೇಂದ್ರದ ಎನ್‌ಎಸ್‌ಡಿ ವಿಭಾಗದ ಡಾ.ಯಶಶ್ರೀ ಶೆಟ್ಟಿ ಮತ್ತಿತರರು ಇದ್ದರು.
Leave a Reply