Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿ ಧಾರ್ಮಿಕ ಶಿಬಿರ ಆಯೋಜನೆ

ಕೋಟ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರ ಆಶಯದಂತೆ ಮಕ್ಕಳಿಗಾಗಿ ಭಜನಾ ಶಿಬಿರ ಎ.14ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12:30 ವರೆಗೆ ಒಂದು ತಿಂಗಳ ಕಾಲ ನಡೆಯಲಿದೆ

ಈ ಭಜನಾ ಶಿಬಿರವನ್ನು ಸಂಗೀತದಲ್ಲಿ ವಿದ್ವಾತ್ ಪಡೆದ ಹಾಗೂ ಹಲವಾರು ಭಜನಾ ಶಿಬಿರಗಳನ್ನು ನಡೆಸಿದ ಪರಿಣತರಿಂದ ಕಾರ್ಯಕ್ರಮ   ನಡೆಸಿ ಕೊಡಲಿದ್ದಾರೆ. ಭಾಗವಹಿಸುವ ಮಕ್ಕಳಿಗೆ ಒಂದರಿAದ ಹತ್ತನೇ ತರಗತಿ ಒಳಪಟ್ಟವರಾಗಬೇಕಿದ್ದು ಯಾವುದೇ ಶುಲ್ಕವಿರುವುದಿಲ್ಲ
ಮಧ್ಯಾಹ್ನದ ಪ್ರಸಾದದ ವ್ಯವಸ್ಥೆಯೊಂದಿಗೆ ಸಂಪೂರ್ಣ ಭಜನಾ ಶಿಬಿರಕ್ಕೆ ಶ್ರೀ ಶ್ರೀಗಳು ಮಾರ್ಗದರ್ಶನ ನೀಡಲಿದ್ದಾರೆ ,ಭಾಗವಹಿಸುವರು ಮಠಕ್ಕೆ ಹಾಗೂ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಶ್ರೀ ಮಠ ತಿಳಿಸಿದೆ.ಮೊ. 8495839474

Leave a Reply

Your email address will not be published. Required fields are marked *