
ಸಾಲಿಗ್ರಾಮ – ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆ ಗ್ರಾಮಸ್ಥರ ವಿರೋಧ ಪ್ರತಿಭಟನೆ ಎಚ್ಚರಿಕೆ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸೇತುವೆ ಬಳಿ ಪ್ರಸ್ತುತ ಇದ್ದ ತ್ಯಾಜ್ಯ ವಿಲೇವಾರಿ ಘಟಕವನ್ನು ಮೇಲ್ದರ್ಜೆಗೆ ಏರಿಸುವ ಪಟ್ಟಣಪಂಚಾಯತ್ ಕ್ರಮಕ್ಕೆ ಇಲ್ಲಿನ ರೈತರು ಮತ್ತು ಗ್ರಾಮಸ್ಥರ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮಸ್ಥರು ಪಾರಂಪಳ್ಳಿ ಗ್ರಾಮದ ಸರ್ವೇ ನಂ. 104/24, 104/25 ರಲ್ಲಿ ಪಟ್ಟಣ ಪಂಚಾಯತ್ ಖರೀದಿಸಿ ಅವೈಜ್ಞಾನಿಕ ರೀತಿ ಸಾರ್ವಜನಿಕರ ವಿರೋಧಿಯಾಗಿ ಡಂಪಿoಗ್ ಯಾರ್ಡ್ ಆಗಿ ಪರಿವರ್ತಿಸಿ ಅಭಿವೃದ್ಧಿ- ಗೊಳಿಸಲು ಹೊರಟಿದ್ದು ಇಲ್ಲಿ ಅನಾಧಿ ಕಾಲದಿಂದಲೂ ಈ ಭಾಗದ ರೈತರು ಇಲ್ಲಿ ಕೃಷಿ ಭೂಮಿಯಾಗಿ ಬೇಸಾಯ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈ ಭೂಮಿಯಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿದ್ದು ಇದೀಗ ಸಾಲಿಗ್ರಾಮ ಪಟ್ಟಣ ಪಂಚಾಯತ್ ತನ್ನ ವ್ಯಾಪ್ತಿಯ ಎಲ್ಲಾ ಕಸ ಕಡ್ಡಿಗಳನ್ನು ಈ ಭಾಗದಲ್ಲಿ ಅವೈಜ್ಞಾನಿಕವಾಗಿ ಸುರಿಯುವ ಹುನ್ನಾರ ನಡೆಸುವ ಮೂಲಕ ಈ ಭಾಗದ ನಾಗರಿಕರಿಗೆ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥ ಮಹೇಶ್ ಪೂಜಾರಿ , ಕಸ ಇಲೆವಾರಿ ಯತ್ನಿಸುವ ಭೂಮಿಗೆ ಹೊಂದಿಕೊoಡಿರುವ ಹೊಳೆಯು ಅನಾಧಿಕಾಲದಿಂದಲೂ ಮೀನುಗಾರರು ಮೀನುಗಾರಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಈ ತ್ಯಾಜ್ಯ ಘಟಕ ರಚನೆಗೊಂಡರೆ ತ್ಯಾಜ್ಯಗಳು ಹೊಳೆಯಲ್ಲಿ ಹರಿಯುವ ಮೂಲಕ ಮೀನಿನ ಸಂತತಿಗಳು ನಾಶವಾಗಿ ನೀರು ಕಲುಷಿತಗೊಂಡು ಮೀನುಗಾರಿಕೆಗೆ ಅವಕಾಶವಿಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗುವ ಮೂಲಕ ಮೀನುಗಾರರ ಜೀವನ ನಿರ್ವಹಣೆಗೆ ಕೊಡಲಿ ಏಟು ಬೀಳುತ್ತದೆ ಅಲ್ಲದೆ ಸಿಆರ್ ಝಡ್ ನಿಯಮದ ಪ್ರಕಾರ ಹೊಳೆ ದಂಡೆಯ 50 ಮೀಟರ್ ವ್ಯಾಪ್ತಿಯ ಒಳಗೆ ಯಾವುದೇ ಕಟ್ಟಡಗಳು ರಚನೆಗೊಳ್ಳಬಾರದು ಎಂದು ನಿಯಮವಿದ್ದರು ಈ ವ್ಯಾಪ್ತಿಯ ಒಳಗೆ ಬರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಖರೀದಿಸಿದ ಜಾಗದಲ್ಲಿ ಕಟ್ಟಡ ಹಾಗೂ ಇನ್ನಿತರ ಕಾಮಗಾರಿಗಳು ನಡೆಯುವುದು ಎಷ್ಟು ಸರಿ.
ಹಾಗಾದರೆ ದೇಶದಲ್ಲಿ ನಾಗರಿಕರಿಗೆ ಒಂದು ಕಾನೂನು, ಇಲಾಖೆಗಳಿಗೆ ಒಂದು ಕಾನೂನು ಎನ್ನುವ ಮನಸ್ಥಿತಿಯಲ್ಲಿ ಅಧಿಕಾರಿ ವರ್ಗದವರೂ ಇದ್ದಾರೆಯೇ,ಸಿಆರ್ ಝಡ್ ವ್ಯಾಪ್ತಿಯಲ್ಲಿ ಸಾಮಾನ್ಯ ನಾಗರಿಕರಿಗೆ ಗೃಹ ನಿರ್ಮಾಣ ಅಥವಾ ಕಟ್ಟಡ ನಿರ್ಮಿಸಲು ಯಾವುದೇ ಅವಕಾಶ ನೀಡದೆ ಇರುವ ಸರಕಾರಿ ವ್ಯವಸ್ಥೆ ಈ ತ್ಯಾಜ್ಯ ಇಲೆವಾರಿ ಘಟಕಗಳಿಗೆ ಪರವಾನಿಗೆ ನೀಡಿದ್ದು ಹೇಗೆ ಎನ್ನುವುದನ್ನು ಪ್ರಶ್ನಿಸಿದರು, ಇತ್ತೀಚಿನ ವರ್ಷದಲ್ಲಿ ಕರ್ನಾಟಕದ ಪ್ರವಾಸೋಧ್ಯಮ ವಿಭಾಗದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಪಾರಂಪಳ್ಳಿ ಗ್ರಾಮದ ಕಯಾಕಿಂಗ್ ಪ್ರಸಿದ್ದಿಯನ್ನು ಪಡೆದಿದ್ದು ಜಿಲ್ಲಾಡಳಿತ ಕೂಡ ಈ ಪ್ರವಾಸೋದ್ಯಮ ಉತ್ತೇಜನಕ್ಕೆ ಮುತುವರ್ಜಿ ವಹಿಸಿದ್ದು ಈ ಪ್ರದೇಶದಲ್ಲಿಯೇ ಸಾರ್ವಜನಿಕರ ಆರೋಗ್ಯ ಮತ್ತು ಕೃಷಿ ಚಟುವಟಿಕೆ ಮಾರಕವಾದ ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆರಿಸುವ ಮೂಲಕ ಇಂತಹ ಪ್ರವಾಸೋದ್ಯಮಕ್ಕೆ ಕೊಡಲಿ ಏಟು ನೀಡುವಂತ್ತಾಗಿದೆ, ತನ್ಮೂಲಕ ಈ ಭಾಗದ ರೈತರು ಮತ್ತು ನಾಗರಿಕರುಗಳ ಮರಣ ಶಾಸನ ಬರೆಯಲು ಪ್ರಯತ್ನಿಸುತ್ತಿದ್ದಾರೆ ,ಈ ತ್ಯಾಜ್ಯ ಇಲೇವಾರಿ ಘಟಕಕ್ಕೆ ಹೊಂದಿಕೊoಡoತೆ ಇರುವ ಸಣ್ಣ ನೀರಾವರಿ ಇಲಾಖೆಯ ಮೂಲಕ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ನಾಗರಿಕರ ಜೀವಜಲದ ಮೂಲವಾಗಿದ್ದು ಇದು ಕೂಡ ಕಲುಷಿತ- ಗೊಳ್ಳುವ ಅಪಾಯವಿದ್ದು ಮುಂದೆ ಈ ಬಗ್ಗೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ಅಭಿವೃದ್ಧಿಗೊಳಿಸುವ ಕ್ರಮದ ವಿರುದ್ಧ ಆಕ್ಷೇಪಿಸಿದ್ದಲ್ಲದೆ ಪಟ್ಟಣಪಂಚಾಯತ್ ಕಾಮಗಾರಿ ಮುಂದುವರೆಸಿದರೆ ಪ.ಪಂ. ಕಚೇರಿ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರಾದ ಸುರೇಂದ್ರ ಪೂಜಾರಿ, ಕೃಷ್ಣ ಪೂಜಾರಿ, ಗಣೇಶ್, ಸಂತೋಷ್, ಉಮೇಶ್, ನಿತೀನ್, ಮನೋಜ್ ಪತ್ರಿಕಾಗೋಷ್ಠಿಯಲ್ಲಿದ್ದರು. ಪ್ರಸ್ತುತ ನಿರ್ಮಾಣಗೊಂಡಿರುವ ಗೋಡಾನ್ ಕಟ್ಟಡ
ಅನಧಿಕೃತವಾಗಿದ್ದು ಇದನ್ನು ನಿರ್ಮಿಸಿದ ಮೂಲ ಮಾಲಕರಿಗೆ ನ್ಯಾಯಾಲಯ ದಂಡ ವಿಧಿಸಿದೆ. ಹಾಗಿದ್ದೂ ಅದೇ ಜಾಗದಲ್ಲಿ ಘಟಕ ಸ್ಥಾಪಿಸುವುದು ಎಷ್ಟು ಸರಿ? ಮುಂದೆ ಈ ಘಟಕದ ಬಗ್ಗೆಯೂ ಕಾನೂನು ಹೋರಾಟ ನಡೆದು ತೆರವುಗೊಳಿಸಲು ಕೋರ್ಟ್ ಆದೇಶ ನೀಡಿದರೆ ಅದರ ನಷ್ಟವನ್ನು ಯಾರು ಹೊರಲಿದ್ದಾರೆ ಎಂದು ಸ್ಥಳೀಯರಾದ ನಾಗರಾಜ್ ಗಾಣಿಗ ಸಾಲಿಗ್ರಾಮ
ಪ್ರಶ್ನಿಸಿದರು.
Leave a Reply