
ವಿದ್ಯಾರ್ಥಿಗಳು ಸಾಧನೆಗೈದಾಗ ಮನ ತುಂಬಿ ನೋಡುವುದು ನಮ್ಮ ಭಾಗ್ಯ. ಸಾಧನೆಯ ಹಿಂದಿನ ಪರಿಶ್ರಮ ಪ್ರಯತ್ನಗಳು ಅನನ್ಯ. ಇಂತಹ ಅಮೋಘ ಪರಿಶ್ರಮ ಮತ್ತು ಯಶಸ್ಸಿಗೆ ಕಾರಣ ಬೈಂದೂರು ವಿಧಾನಸಭಾ ಕ್ಷೇತ್ರದ ನಮ್ಮ ಹೆಮ್ಮೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಉದ್ಯೋಗಗಳನ್ನು ಪಡೆಯಲು ಅನುಕೂಲವಾಗುವಂತೆ ನಿರoತರ ತರಬೇತಿ ನಡೆಯಬೇಕಿದೆ ಎಂಬ ಇಂಗಿತ ವ್ಯಕ್ತಪಡಿಸಿದರು. ದ್ವಿತೀಯ ಬಿ.ಎ ತರಗತಿಯ ಅಂಧ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಗುರುತಿಸಿ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಜ್ಞಾನವನ್ನು ಪಡೆದು ಸಮಾಜದೆದುರು ನಿಂತು ಮಾತನಾಡುವ ಮಾನಸಿಕ ಸಿದ್ಧತೆಗಾಗಿ ವಿದ್ಯೆ ಅವಶ್ಯಕ ಎಂದು ಹೇಳಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಗೈನಾಡಿ ಅವರು ಪದವಿ ನಂತರದ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸುರತ್ಕಲ್ ಇಲ್ಲಿನ ಪ್ರಾಧ್ಯಾಪಕ ಡಾ.ರಾಜೇಶ್ ಆಚಾರ್ಯ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇರುವ ಅವಕಾಶ ಮತ್ತು ಅಧ್ಯಯನ ಶೀಲತೆ ಕುರಿತು ದಿಕ್ಸೂಚಿ ಭಾಷಣ ನೆರವೇರಿಸಿದರು. ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಐಕ್ಯೂಎಸಿ ಸಂಚಾಲಕ ಡಾ. ವಸಂತ ಜಿ ವಾರ್ಷಿಕ ವರದಿಯನ್ನು ಮಂಡಿಸಿದರು. ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಕು. ಅಕ್ಷತಾ, ಸ್ನೇಹದಾಸ್, ಪ್ರತೀಕ್ಷಾ ಪಿ ಶೆಟ್ಟಿ, ಕರ್ನಾಟಕ ರಾಜ್ಯ ಉಪನ್ಯಾಸಕರ.ಅರ್ಹತಾ ಪರೀಕ್ಷೆ ಕೆಸೆಟ್ ಉತ್ತೀರ್ಣರಾದ ಕು.ರಶ್ಮಿತಾ ಮತ್ತು ಕಾಲೇಜಿಗೆ ಕೊಡುಗೆ ನೀಡಿದ ಜಯಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಷೇಮಪಾಲನಾಧಿಕಾರಿ ಡಾ. ಗಿರೀಶ್
ಶಾನುಭಾಗ್ ವಂದಿಸಿದರು. ಶ್ರೀಮತಿ ರೇಖಾ ಕುಲಾಲ್ ನಿರ್ವಹಿಸಿದರು. ವಿದ್ಯಾರ್ಥಿನಿ ಅಮೃತಾ ಮತ್ತು
ತಂಡ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರನಾರಾಯಣ ಭಟ್ ಕೊಂಡಳ್ಳಿ,
ವಿದ್ಯಾರ್ಥಿ ನಾಯಕ ದರ್ಶನ್, ಉಪಾಧ್ಯಕ್ಷ ಶಶಾಂಕ, ಕಾರ್ಯದರ್ಶಿ ರಕ್ಷಿತಾ ಜೋಗಿ, ಸಾಂಸ್ಕೃತಿಕ
ಕಾರ್ಯದರ್ಶಿ ಸುಲೋಚನಾ, ಕ್ರೀಡಾ ಕಾರ್ಯದರ್ಶಿ ಗೌರೀಶ್ ಉಪಸ್ಥಿತರಿದ್ದರು.

Leave a Reply