
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರದ ರಕ್ತೇಶ್ವರಿ
ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಶನಿವಾರ
ಸಂಪನ್ನಗೊoಡಿತು. ದೇಗುಲದಲ್ಲಿ ಪೂರ್ವಾಹ್ನ ಸಾಮೂಹಿಕ ಪ್ರಾರ್ಥನೆ, ರಕ್ತೇಶ್ವರಿ ಹಾಗೂ ನಾಗಾಧಿ ಪರಿವಾರ ದೇವರಿಗೆ ನವಕ ಕುಂಭ ಸ್ಥಾಪನೆ, ಬ್ರಹ್ಮಲಿಂಗ ದೇವರಿಗೆ ಶತರುದ್ರ,ದುರ್ಗಾಹೋಮ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಮಂಗಳಾರತಿ ಪ್ರಸಾದ ವಿತರಣೆ
ಕಾರ್ಯಕ್ರಮಗಳು ಜರಗಿದವು.
ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪಾಂಡೇಶ್ವರ ಇವರ ಸಮ್ಮುಖದಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ ರತ್ನಾಕರ ಸೋಮಯಾಜಿ ನೇತೃತ್ವದಲ್ಲಿ ಜರಗಿತು. ಅಪರಾಹ್ನ ಮಹಾಅನ್ನಸಂತರ್ಪಣೆ, ಸಂಜೆ ರಕ್ತೇಶ್ವರಿ ದೇವಿಗೆ ಪೂಜೆವಿಶೇಷ ಸರ್ವಾಲಂಕಾರ ಪೂಜೆ, ದೀಪೋತ್ಸವ ಕಾರ್ಯಕ್ರಮಗಳು ನಡೆಯಿತು.
ಭಕ್ತಾಧಿಗಳಿಗೆ ಪನಿವಾರ ಪ್ರಸಾದ ವಿತರಣೆ ನಡೆಯಿತು. ರಾತ್ರಿ ೯ ರಿಂದ ಕಳವಾರ ಬಾಳ ಬೆಂಕಿನಾಥೇಶ್ವರ
ಮೇಳದಿoದ ಯಕ್ಷಗಾನ ರಕ್ತೇಶ್ವರಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತು. ಸಾಸ್ತಾನದ ಪಾಂಡೇಶ್ವರದ ರಕ್ತೇಶ್ವರಿ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಶನಿವಾರ ಸಂಪನ್ನಗೊoಡಿತು. ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪಾಂಡೇಶ್ವರ ಮತ್ತಿತರರು ಇದ್ದರು.
Leave a Reply