Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷಗಾನದ ಹಿರಿಯ ಕಲಾವಿದ ಎಂ.ಎ.ನಾಯ್ಕಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ
ಕೋಟ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಆಯೋಜನೆ

ಕೋಟ:ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸಮಾಜದ ಕೊಡುಗೆ ಅಪಾರ. ಹಾರಾಡಿ ಮಹಾಬಲ ಗಾಣಿಗರು ಡಾ.ಶಿವರಾಮ ಕಾರಂತರೊAದಿಗೆ ತಿರುಗಾಟ ಮಾಡಿದ್ದು ಯಕ್ಷಗಾನದ ಕಂಪನ್ನು ವಿಶ್ವದೆಲ್ಲೆಡೆ ಪಸರಿದ್ದರು ಎಂದು ಯಕ್ಷಗಾನ ವಿಮರ್ಶಕ ಎಸ್.ವಿ. ಉದಯಕುಮಾರ ಶೆಟ್ಟಿ ತಿಳಿಸಿದರು.
ಅವರು ಸಾಸ್ತಾನದಲ್ಲಿ  ಕೋಟ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ರವಿವಾರ ನಡೆದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಉದಯ ಕುಮಾರ್ ಮಾತನಾಡಿ, ಸಮಾಜವನ್ನು ಬಲಗೊಳಿಸಲು ಎಲ್ಲರೂ ಸಂಘಟಿತರಾಗಬೇಕು. ಗಾಣಿಗ ಸಮಾಜದ ಮೂಲ ಸ್ಥಾನವಾದ ಬಾರ್ಕೂರು ವೇಣುಗೋಪಾಲ ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದ ಎಂ.ಎ.ನಾಯ್ಕ ಅವರಿಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಂಬೈನ ಹೋಟೆಲ್ ಉದ್ಯಮಿ ಯೋಗೀಂದ್ರ ಗಾಣಿಗ ಪ್ರಶಸ್ತಿ ಪ್ರದಾನಗೈದರು. ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಪಿ.ಎಚ್.ಡಿ. ಪದವಿದರ ಡಾ.ಶಮಂತ್ ಕುಮಾರ್, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕಿ ಉಮಾ ಗಾಣಿಗ, ಅಚ್ಲಾಡಿ ಸಿದ್ಧಿವಿನಾಯಕ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲ ಗಾಣಿಗ ಅಚ್ಲಾಡಿ, ರಂಗಕಲಾವಿದ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿ ಸಾಧಕರನ್ನು ಗೌರವಿಸಲಾಯಿತು. ಜಿಲ್ಲಾ ಮಟ್ಟದ ಸಾಂಸ್ಕöÈತಿಕ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ಗಾಣಿಗ ಯುವ ಸಂಘಟನೆಯ ಅಧ್ಯಕ್ಷ  ಗಿರೀಶ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇಣುಗೋಪಾಲ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಗಣೇಶ ಚೆಲ್ಲಮಕ್ಕಿ, ಗಾಣಿಗ ಯುವ ಸಂಘಟನೆ ಜಿಲ್ಲಾಧ್ಯಕ್ಷ ದಿನೇಶ ಗಾಣಿಗ ಕೋಟ, ಕೋಟ ಸಂಘಟನೆ ಗೌರವಾಧ್ಯಕ್ಷ  ಪ್ರಶಾಂತ ಗಾಣಿಗ, ಸಂಪರ್ಕ ಸುಧಾ ಪತ್ರಿಕೆ ಸಂಪಾದಕ  ಚಂದ್ರಶೇಖರ ಬೀಜಾಡಿ, ಮಹಿಳಾ ಸಂಘಟನೆಯ ಅಧ್ಯಕ್ಷೆ  ರೇಖಾ ಗಣೇಶ ಚಿತ್ರಪಾಡಿ, ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸದಸ್ಯರಾದ  ವಿಶ್ವನಾಥ ಗಾಣಿಗ, ಜನಾರ್ಧನ ಬ್ರಹ್ಮಾವರ, ವಸಂತಿ ರಾಜು,  ಇದ್ದರು.

ಉಡುಪಿ ಜಿಲ್ಲಾ ಗಾಣಿಗ ಸಮಾಜದ ಪ್ರಧಾನಕಾರ್ಯದರ್ಶಿ
ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟ ಸಂಘಟನೆ ಖಜಾಂಚಿ ಆನಂದ ಗಾಣಿಗ ಸ್ವಾಗತಿಸಿದರು. ರಾಜೇಶ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಸಾಸ್ತಾನದಲ್ಲಿ  ಕೋಟ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಎಂ.ಎ.ನಾಯ್ಕ ಅವರಿಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು, ವೇಣುಗೋಪಾಲ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಗಣೇಶ ಚೆಲ್ಲಮಕ್ಕಿ, ಗಾಣಿಗ ಯುವ ಸಂಘಟನೆ ಜಿಲ್ಲಾಧ್ಯಕ್ಷ ದಿನೇಶ ಗಾಣಿಗ ಕೋಟ, ಕೋಟ ಸಂಘಟನೆ ಗೌರವಾಧ್ಯಕ್ಷ  ಪ್ರಶಾಂತ ಗಾಣಿಗ, ಸಂಪರ್ಕ ಸುಧಾ ಪತ್ರಿಕೆ ಸಂಪಾದಕ  ಚಂದ್ರಶೇಖರ ಬೀಜಾಡಿ ಇದ್ದರು.

Leave a Reply

Your email address will not be published. Required fields are marked *