Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕ್ರಿಕೆಟ್ ಬೆಟ್ಟಿಂಗ್ ದಂಧೆ : ಇಬ್ಬರು ಅರೆಸ್ಟ್…!!

ಕೋಟ : ಉಡುಪಿ ಜಿಲ್ಲೆಯ ಕೋಟ ಸಮೀಪ ಕೆಲವು ಮಂದಿ ಯುವಕರು ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿರು ಮಾಹಿತಿ ಮೇರೆಗೆ ಕೋಟ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಶಿವರಾಜ್ ಹಾಗೂ ಪ್ರದೀಪ್ ಎಂದು ತಿಳಿದು ಬಂದಿದೆ.

ಈ ಆರೋಪಿಗಳು ಚಂದ್ರ ಜನ್ನಾಡಿ ಜೊತೆ ಫೋನ್ ನಲ್ಲಿ  ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಚಂದ್ರನ ವಿರುದ್ಧ ಪ್ರಕರಣ ದಾಖಲಾಗಿದೆ.ಕೋಟ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಘಟನೆ ವಿವರ: ದಿನಾಂಕ 03/06/2025 ರಂದು ರಾತ್ರಿ ರಾಘವೇಂದ್ರ ಸಿ, ಪೊಲೀಸ್‌ ಉಪನಿರೀಕ್ಷಕರು(ಕಾ&ಸು ), ಕೋಟ ಪೊಲೀಸ್‌ ಠಾಣೆ ಇವರಿಗೆ ಬ್ರಹ್ಮಾವರ ತಾಲ್ಲೂಕು ಶಿರಿಯಾರ ಗ್ರಾಮದ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪದಲ್ಲಿ ಕೆಲಮಂದಿ ಯುವಕರು ಜೊತೆಯಾಗಿ ಸೇರಿಕೊಂಡು RCB (ರಾಯಲ್ ಚಾಲೆಂಜ್ ಬೆಂಗಳೂರು ) ಮತ್ತು PBKS ( ಪಂಜಾಬ್‌ ಕಿಂಗ್ಸ್‌ ) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್‌ ಪೈನಲ್‌ ಮ್ಯಾಚ್‌ಗೆ ಸಂಬಂಧಪಟ್ಟು, ಸಾವರ್ಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಮೊಬೈಲ್‌ ಪೋನ್‌ ಹಿಡಿದುಕೊಂಡು RCB ಮತ್ತು PBKS ಎಂದು ಹೇಳಿ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್‌ ಮುಖಾಂತರ 3ನೇ ಆರೋಪಿತ ಚಂದ್ರ ಜನ್ನಾಡಿ ಎಂಬಾತನ ಜೊತೆ ಸಂಘಟಿತವಾಗಿ ಅಕ್ರಮವಾಗಿ ಕ್ರಿಕೇಟ್‌ ಬೆಟ್ಟಿಂಗ್‌ App Online ಮೂಲಕ ಆಡುತ್ತಿದ್ದ 1 ನೇ ಆರೋಪಿತ ಶಿವರಾಜ್‌ ಹಾಗೂ ಬೆಟ್ಟಿಂಗ್‌ ಆಡಿಸುತ್ತಿದ್ದ 2 ನೇ ಆರೋಪಿತ ಪ್ರದೀಪ ಎಂಬಾತನನ್ನು ವಶಕ್ಕೆ ಪಡೆದು ಕ್ರಿಕೆಟ್‌ ಬೆಟ್ಟಿಂಗ್ ಗೆ ಬಳಸಿದ 3 ಮೊಬೈಲ್ ಪೋನ್ ನ್ನು ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2025 ಕಲಂ: 112 BNS & 78 (i)(iii) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *