
ಕೋಟ : ಯಕ್ಷಾಂತರAಗ ವ್ಯವಸಾಯೀ ಯಕ್ಷ ತಂಡ ಕೋಟ ತಂಡದ 10ನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿ ಇತ್ತೀಚಿಗೆ ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ನಲ್ಲಿ ಆರಂಭಗೊAಡಿತು.
ಕಾರ್ಯಕ್ರಮವನ್ನು ತಾಳ ನುಡಿಸುವುದರ ಮೂಲಕ ರಂಗ ಭೂಮಿ ನಿರ್ದೇಶಕಿ ರಸರಂಗ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿ ಸುಧಾ ಮಣೂರು 2024-25 ರ ಸಾಲಿನ ಯಕ್ಷ ತರಗತಿಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉತ್ತಮ ಯಕ್ಷಗಾನ ಕಲಿಯುವಿಕೆಗಾಗಿ ಶ್ರೇಷ್ಠ ಅನುಭವಿ ಯಕ್ಷ ಗುರುಗಳ ಅಗತ್ಯತೆ ಇದೆ. ಅಂತಹ ಗುರುಗಳು ಈ ತಂಡದಲ್ಲಿದ್ದು ಕ್ರಮ ಪ್ರಕಾರವಾದ ಯಕ್ಷ ತರಬೇತಿಯನ್ನು ಕಳೆದ 10 ವರ್ಷಗಳಿಂದ ಉಚಿತವಾಗಿ ನೀಡುತ್ತಿರುವುದು ಹೆಮ್ಮೆ ತರುತ್ತಿದೆ ಇದು ಅಭಿನಂದನೀಯಕಾರ್ಯ ಇಂಥಹ ಗುರುಗಳಿಂದ ವಿದ್ಯೆಯನ್ನು ಕಲಿಯುತ್ತಿರುವ ನೀವೆಲ್ಲಾ ಪುಣ್ಯವಂತರು ಎಂಬುದಾಗಿ ವಿದ್ಯಾರ್ಥಿಗಳಿಗೂ ಸಂಸ್ಥೆಗೂ ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಡಾ.ಕಾರಂತ ಥೀಂ ಪಾರ್ಕ್ನ ಟ್ರಸ್ಟಿ,ಯಕ್ಷಾಂತರAಗದ ಕಾರ್ಯಾಧ್ಯಕ್ಷ ಎಂ.ಸುಬ್ರಾಯ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ಅಜಪುರ ಯಕ್ಷಗಾನ ಸಂಘದ ಕಾರ್ಯದರ್ಶಿ ಪ್ರತೀಶ ಕುಮಾರ್ ಭಾಗವಹಿಸಿ ಶುಭವನ್ನು ಹಾರೈಸಿದರು. ಸಂಸ್ಥೆಯ ಕಾರ್ಯದರ್ಶಿ ಹಾಗೂ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿ ಪ್ರಸ್ತಾವನೆಗೈದು ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಗೆ ಕಲಿಕಾ ತರಗತಿ ಪ್ರಾರಂಭಿಸಲಾಯಿತು.
ಯಕ್ಷಾತರoಗ ವ್ಯವಸಾಯೀ ಯಕ್ಷ ತಂಡ ಕೋಟ ತಂಡದ 10ನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿಯನ್ನು ರಂಗ ಭೂಮಿ ನಿರ್ದೇಶಕಿ ರಸರಂಗ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿ ಸುಧಾ ಮಣೂರು ಉದ್ಘಾಟಿಸಿದರು.
ಡಾ.ಕಾರಂತ ಥೀಂ ಪಾರ್ಕ್ನ ಟ್ರಸ್ಟಿ,ಯಕ್ಷಾಂತರAಗದ ಕಾರ್ಯಾಧ್ಯಕ್ಷ ಎಂ.ಸುಬ್ರಾಯ ಆಚಾರ್ಯ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಇದ್ದರು.
Leave a Reply