Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತುಳಸಿ ವಿದ್ಯಾ ಮಂದಿರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಮಂತ್ರದೀಕ್ಷಾ ಕಾರ್ಯಕ್ರಮ

ಕೋಟ: ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಮಂತ್ರದೀಕ್ಷಾ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಂಡಿತು.

ವೇದಮೂರ್ತಿ  ಶ್ರೀನಿವಾಸ ಹಾಗೂ ಕೇಶವ ಅಡಿಗರ ನೇತೃತ್ವದಲ್ಲಿ ಮಕ್ಕಳಿಗೆ ದೀಕ್ಷಾ ಕಾರ್ಯಕ್ರಮ ನೆರವೇರಿತು. ಪಾಲಕರು ಮಕ್ಕಳ ಬೆರಳನ್ನು ಹಿಡಿದು ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಯುವ ಮೂಲಕ ಅಕ್ಷರಾಭ್ಯಾಸವನ್ನು ಮಾಡಿಸಿದರು. ಈ ಕಾರ್ಯಕ್ರಮವು ಮಕ್ಕಳಲ್ಲಿ ಅಕ್ಷರಗಳ ಬಗ್ಗೆ ಆಸಕ್ತಿಯನ್ನು ಮೂಡಿಸಲು ಜ್ಞಾನದ ಹಸಿವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ವೇದಮೂರ್ತಿ  ಶ್ರೀನಿವಾಸ ನುಡಿದರು.

ತದನಂತರ ತುಳಸಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಕೃಷ್ಣರಾಯ ಶಾನುಬಾಗ್ ರವರು ಮಕ್ಕಳಿಗೆ ಮಂತ್ರದೀಕ್ಷೆಯನ್ನು ನೀಡಿ ಎಲ್ಲಿ ದೇವರಿಗೆ ಪೂಜೆ ನಡೆಯುತ್ತದೆಯೋ ಅದೇ ಮಂದಿರ. ಮಕ್ಕಳಿಗೆ ದೇವ ಮತ್ತು ದೇಹ ಶ್ರದ್ಧೆಯನ್ನು ಕಲಸಬೇಕು.ಅದಕ್ಕಾಗಿ ಮಂತ್ರದೀಕ್ಷೆ ಅವಶ್ಯಕ ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್,ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ,ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು.

ತುಳಸಿ ವಿದ್ಯಾ ಮಂದಿರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಮಂತ್ರದೀಕ್ಷಾ ಕಾರ್ಯಕ್ರಮದಲ್ಲಿ ತುಳಸಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಕೃಷ್ಣರಾಯ ಶಾನುಬಾಗ್ ಮಂತ್ರದೀಕ್ಷೆಯನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್,ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *