Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿಯಲ್ಲಿ ಎಸ್ ಬಿ ಐ ನ ಮಿನಿ ಗೃಹ ಸಾಲ ಕೇಂದ್ರ ಉದ್ಘಾಟನೆ

ಉಡುಪಿ ಬನ್ನಂಜೆ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಚೇರಿಯ ಕಟ್ಟಡದಲ್ಲಿ ಎಸ್ ಬಿ ಐ ನ ಮಿನಿ ಗೃಹ ಸಾಲ ಕೇಂದ್ರವನ್ನು
ಎಸ್ ಬಿ ಐ ಬೆಂಗಳೂರು ವೃತ್ತದ ಜನರಲ್ ಮ್ಯಾನೇಜರ್ ಶ್ರೀ ಪ್ರಫುಲ್ಲ ಕುಮಾರ ಜೇನಾ  ಮತ್ತು ಮಂಗಳೂರು ಆಡಳಿತ ಕಚೇರಿಯ  ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣ ಮೋಹನ್ ಎಂ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಪ್ರಾದೇಶಿಕ  ವ್ಯವಹಾರ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಬಿ ಪ್ರಕಾಶ್ ಅಡಿಗ ಅವರು ಮಾತನಾಡಿ ಗೃಹ ಸಾಲ ಗ್ರಾಹಕರ ಅನುಕೂಲಕ್ಕಾಗಿ ಈ ಕೇಂದ್ರವನ್ನು ತೆರೆದಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕರಾದ ಶ್ರೀ ಕೃಷ್ಣರಾಜ ಭಟ್ ಕೀಳಂಜೆ, ಶ್ರೀಮತಿ ಮಹದೇವಮ್ಮ, ಶ್ರೀಮತಿ  ಅಬಾ ಲಾಲ್ ಗ್ರಾಹಕರದ ಕರುಣಾಕರ ಸಾಲಿಯಾನ್ ಉಪಸ್ಥಿತರಿದ್ದರು. ಶ್ರೀಮತಿ ಅಮೃತ ಅವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *