
ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯಕ್ಕೆ ಅನುಗುಣವಾಗಿ ಯೋಗ ಗುರುಗಳಾದ ಶ್ರೀ ಪಿ.ವಿ.ಭಟ್ ಇವರ ಮಾರ್ಗದರ್ಶನದಲ್ಲಿ ಈ ಸಾರಿಯ ಯೋಗ ಶಿಷ್ಟಾಚಾರದಂತೆ ಯೋಗಾಸನ ಮತ್ತು ಪ್ರಾಣಾಯಾಮ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗುರುಗಳಾದ ಶ್ರೀ ಪಿ.ವಿ. ಭಟ್ ಮತ್ತು ಶ್ರೀ ಸತೀಶ್ ಕುಂದರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ಪಿ.ವಿ. ಭಟ್ ಅವರು ಮಾತನಾಡುತ್ತಾ ಯೋಗದ ಮಹತ್ವದ ಬಗ್ಗೆ ಹಾಗೂ ಅದನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಆಗುವ ಪ್ರಯೋಜನಗಳ ಬಗ್ಗೆ ತಿಳಿ ಹೇಳಿದರು. ಗುರುಗಳಾದ ಶ್ರೀ ಸತೀಶ್ ಕುಂದರ್ ಅವರು ಮಾತನಾಡಿ ಯೋಗ ಅಭ್ಯಾಸದಲ್ಲಿ ನಿರಂತರತೆ ಇರಬೇಕು ಮತ್ತು ಆದಷ್ಟು ಬೆಳಗಿನ ಸಮಯದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಯೋಗಭ್ಯಾಸ ಮಾಡುವಂತೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಯೋಗ ಬಂಧುಗಳಾದ ಚಂದ್ರಪ್ರತಿಮಾ ಮತ್ತು ಸುನಿತಾ ಶೆಟ್ಟಿ ಅವರು ನಿರಂತರ ಯೋಗಭ್ಯಾಸದಿಂದ ತಮಗಾದ ಪ್ರಯೋಜನಗಳ ಬಗ್ಗೆ, ತಮ್ಮಲ್ಲಾದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಯೋಗ ಶಿಕ್ಷಕಿ ಸುನೀತಾ ಚೈತನ್ಯ ಸ್ವಾಗತಿಸಿದರು. ಅನುಪಮಾ, ರೂಪ,ಮಾಲತಿ ಶೆಟ್ಟಿ, ಭಾರತಿ,ಸುಮಿತ್ರ,ಶಾಂತ, ಮಾಲತಿ ಭರತ್ ರಾಜ್, ವೇದ ಶೆಟ್ಟಿ, ಶುಭಾಶೆಟ್ಟಿ, ರಾಜೇಶ್ವರಿ, ಮಮತಾ, ಗಾಯತ್ರಿ ಭಟ್, ಶ್ರೀಲಕ್ಷ್ಮಿ, ಜಯಂತಿ ಉಡುಪ, ಸಂಧ್ಯಾ ಶೇಟ್ ಸಹಕರಿಸಿದರು. ಲಕ್ಷ್ಮೀ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಅಂಜಲಿ ವಂದನಾರ್ಪಣೆಗೈದರು.*
Leave a Reply