ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜಿಲ್ಲಾಧಿಕಾರಿಯವರ ಕಜೇರಿ, ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ.) ಉಡುಪಿ ಜಿಲ್ಲಾ ಶಾಖೆ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ, ಉಡುಪಿ ಮತ್ತು ರಕ್ತನಿಧಿ ಕೇಂದ್ರ, ಕೆ.ಎಂ.ಸಿ., ಮಣಿಪಾಲ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ ದಿನಾಂಕ : 27-06-2025ನೇ ಶುಕ್ರವಾರದಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ವರೆಗೆ, ವಾಜಪೇಯಿ ಸಭಾಂಗಣ, ಜಿಲ್ಲಾಧಿಕಾರಿ ಕಛೇರಿ, ಮಣಿಪಾಲ, ಉಡುಪಿ ಇಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಸ್ವರೂಪ್ ಕೆ.ಟಿ , ಭಾ.ಆ.ಸೇ, ಮಾನ್ಯ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ನೆರವೇರಿಸಲಿದ್ದಾರೆ , ಮುಖ್ಯ ಅತಿಥಿಗಳಾಗಿ ಪ್ರತೀಕ್ ಬಾಯಲ್, ಭಾ.ಆ.ಸೇ., ಮಾನ್ಯ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ, ಅತಿಥಿಗಳಾಗಿ ಆಬೀದ್ ಗದ್ಯಾಳ, ಕೆ.ಎ.ಎಸ್., ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ. ಡಾ| ಅಶೋಕ್, ಜಿಲ್ಲಾ ಸರ್ಜನ್, ಸರಕಾರಿ ಆಸ್ಪತ್ರೆ, ಅಜ್ಜರಕಾಡು, ಉಡುಪಿ, ದಿನಕರ ಶೆಟ್ಟಿ ಅಂಪಾರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಉಡುಪಿ ಜಿಲ್ಲಾ ಶಾಖೆ, ಡಾ| ಶಮ್ಮಿ ಶಾಸ್ತ್ರಿ, ವೈದ್ಯಾಧಿಕಾರಿ, ರಕ್ತನಿಧಿ ಕೇಂದ್ರ, ಕೆಎಂಸಿ. ಮಣಿಪಾಲ ಇವರೆಲ್ಲರೂ ಭಾಗವಹಿಸಲಿದ್ದಾರೆ. ಎಂದು ರಕ್ತದಾನ ಶಿಬಿರದ ಸಂಯೋಜಕರಾದ ಸಂಪತ್ ಮತ್ತು ಯತೀಶ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು- 9980962101, 8553220926















Leave a Reply