Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

“ಯೋಗ ಏಕಾಗ್ರತೆ ಮತ್ತು ಉತ್ತಮ ಆರೋಗ್ಯಕ್ಕೆ ರಹದಾರಿ – ಡಾ.ಅನುಲೇಖ ಬಾಯರಿ.

ಯೋಗವೆಂದರೆ ಕೇವಲ ಆಸನಗಳು ಮತ್ತು ಪ್ರಾಣಾಯಾಮ ಮಾತ್ರವಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಎಂಬ ಎಂಟು ಹಂತಗಳನ್ನೊಳಗೊAಡ ಜೀವನಶೈಲಿಯಾಗಿದೆ. ಕೇವಲ ದೈಹಿಕ ಸದೃಢತೆಯಲ್ಲದೆ ಮಾನಸಿಕವಾಗಿಯೂ ಮನುಷ್ಯನನ್ನು ಸದೃಢವಾಗಿಸುವಲ್ಲಿ ಯೋಗವು ಸಹಕಾರಿಯಾಗಿದೆ. ಎಲ್ಲರೂ ಯೋಗವನ್ನು ಕೇವಲ ಯೋಗ ದಿನಕ್ಕೆ ಸೀಮಿತವಾಗಿರಿಸದೆ ಪ್ರತಿದಿನದ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ವೃದ್ಧಿ ಮತ್ತು ಉನ್ನತ ಅಧ್ಯಯನಕ್ಕೆ  ಚಿತ್ತೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಅನುಲೇಖ ಬಾಯರಿ ಅವರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣದ ಆಂತರಿಕ ಗುಣಮಟ್ಟ ಭರವಸ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಗಿರೀಶ್ ಶಾನುಭೋಗ್ ವಿದ್ಯಾರ್ಥಿಗಳಿಗೆ ದಿನವು ಯೋಗಾಭ್ಯಾಸವನ್ನು ಮಾಡುವಂತೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ದಿನನಿತ್ಯ ಕನಿಷ್ಠ 20 ನಿಮಿಷ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳ ಕುರಿತು ಅನುಭವಗಳನ್ನು ಹಂಚಿಕೊAಡರು. ಕಾಲೇಜಿನ ಸ್ನಾತಕೋತ್ತರ ಸಂಯೋಜಕಿ ಕು. ಪ್ರಜ್ಞಾ ಉಪಸ್ಥಿತರಿದ್ದರು. ದ್ವಿತೀಯ ಎಂ.ಕಾo. ವಿದ್ಯಾರ್ಥಿನಿ ಕು. ಸಾಧನಾ ಕಾರ್ಯಕ್ರಮವನ್ನು ನಿರೂಪಿಸಿ, ಕು. ಶಿಲ್ಪಾ ಸ್ವಾಗತಿಸಿ, ಕು. ಅಶ್ವಿನಿ ವಂದಿಸಿದರು. ನಂತರ ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಡಾ. ಅನುಲೇಖ ಬಾಯರಿ ಅವರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಅವಶ್ಯಕವಾದ ಯೋಗಾಸನಗಳನ್ನು ತರಬೇತಿ ನೀಡಿದರು.

Leave a Reply

Your email address will not be published. Required fields are marked *