Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ-ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ.
ಬಿಜೆಪಿ ಸರಕಾರದ ಜನಪ್ರಿಯ ಯೋಜನೆಗಳಿಗೆ ಕಾಂಗ್ರೆಸ್ ಬೆದರಿದೆ

ಕೋಟ: ಪ್ರಸ್ತುತ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರ ಹಿಂದಿನ ಬಿಜೆಪಿ ಆಡಳಿತ ಅವಧಿಯಲ್ಲಿದ್ದ ಜನಪ್ರಿಯ ಯೋಜನೆಗಳನ್ನು ಸಹಿಸದೆ ಅದಕ್ಕೆ ಮುಕ್ತಿಗಾಣಿಸಲು ಮುಂದಾಗಿದೆ ಇದು ನಾಚಿಕೆಗೆಡಿನ ವಿಚಾರವಾಗಿದೆ ಎಂದು ಬಿಜೆಪಿ ಮುಖಂಡ ಸುರೇಶ್ ಪೂಜಾರಿ ಪಾಂಡೇಶ್ವರ ಹೇಳಿದರು.

ಮಂಗಳವಾರ ಪಾಂಡೇಶ್ವರ ಗ್ರಾಮಪಂಚಾಯತ್ ಮುಂಭಾಗ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಕ್ತಿ ಕೇಂದ್ರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಬಡವರ ಕಲ್ಯಾಣಕ್ಕಾಗಿ ಸಂಧ್ಯಾ ಸುರಕ್ಷಾ ಸೇರಿದಂತೆ ನಿರ್ಗತಿಕರ ಕಲ್ಯಾಣ ಯೋಜನೆಗಳಿಗೆ ಬ್ರೇಕ್ ಹಾಕಲು ಹೊರಟಿದೆ ಇದು ನಿಮ್ಮಿಂದ ಸಾಧ್ಯವಿಲ ಇದಕ್ಕೆ ಅವಕಾಶ ಬಿಜೆಪಿ ನೀಡುವುದಿಲ್ಲ ಬದಲಾಗಿ ರಾಜ್ಯಾದ್ಯಂತ ಈಗಾಗಲೇ ದೊಡ್ಡ ಮಟ್ಟದ ಹೋರಾಟಕ್ಕಿಳಿದಿದೆ ಅಲ್ಲದೆ ಫಲಾನುಭವಿಗಳ ಕಣ್ಣಿರು ನಿಮ್ಮನ್ನು ಬೆಂಬಿಡದೆ ಕಾಡಲಿದೆ ಸ್ಥಳೀಯಾಡಳಿತದ ಸೌಲಭ್ಯಗಳನ್ನು ಕಡಿತಗೊಳಿಸಿ ಜನಸಾಮಾನ್ಯರನ್ನು ಜಿಲ್ಲೆಯ ಮೂಲೆ ಮೂಲೆಗಳಿಗೆ ಅಲೆಯುವಂತೆ ಮಾಡಲಾಗುತ್ತಿದೆ.

ಇದರ ಬಗ್ಗೆ ಜನ ಸುಮ್ಮನೆ ಕೂರದೆ ಬೀದಿಗಿಳಿಯಲಿದೆ ಎಂದು ಎಚ್ಚರಿಸಿದರಲ್ಲದೆ ರಾಜ್ಯ ಸರಕಾರ ನಿದ್ರಾಹೀನ ಸ್ಥಿತಿಯಲ್ಲಿ ಆಡಳಿತ ಮಾಡುತ್ತಿದೆ ಎಂದು ಛೇಡಿಸಿದರು.
ಪ್ರತಿಭಟನಾ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗಿಯಾದರು.

ಇದೇ ವೇಳೆ ಜನಸಂಘದ ಶ್ಯಾಮ ಪ್ರಕಾಶ್ ಮುಖರ್ಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಭನಮನ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ  ರಾಜ್ಯ ಸರಕಾರದ ನಡೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ  ಕೆ.ವಿ ರಮೇಶ್ ರಾವ್  ಪಾಂಡೇಶ್ವರ, ಮಾಜಿಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ,ಮಾಜಿ ಸದಸ್ಯ ವಿಲ್ರೆö್ಫöÊಡ್ ರ‍್ವಾಚ್,ಪಂಚಾಯತ್ ಸದಸ್ಯರಾದ ರವೀಶ್ ಶ್ರೀಯಾನ್,ಸಂಧ್ಯಾ ರಾವ್,ಸುಜಾತ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ನಿರ್ವಹಿಸಿದರು.

ಮಂಗಳವಾರ ಪಾಂಡೇಶ್ವರ ಗ್ರಾಮಪಂಚಾಯತ್ ಮುಂಭಾಗ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಕ್ತಿ ಕೇಂದ್ರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಸುರೇಶ್ ಪೂಜಾರಿ ಪಾಂಡೇಶ್ವರ ಮಾತನಾಡಿದರು. ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ,  ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ  ಕೆ.ವಿ ರಮೇಶ್ ರಾವ್  ಪಾಂಡೇಶ್ವರ, ಮಾಜಿಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ,ಮಾಜಿ ಸದಸ್ಯ ವಿಲ್ಫ್ರೆಂಡ್  ರ‍್ವಾಚ್ ಇದ್ದರು.

Leave a Reply

Your email address will not be published. Required fields are marked *