Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜುಲೈ 4, 5 ಮತ್ತು 6 ರಂದು ಉಡುಪಿಯಲ್ಲಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳ

ಹಲಸು – ಮಾವು – ಕೃಷಿ – ಕರಕುಶಲ, ಸಾಂಪ್ರದಾಯಿಕ ಬೆಳೆ ಮತ್ತು ತಿಂಡಿ ತಿನಿಸುಗಳನ್ನು ಈ ಬಿರುಸಿನ ಮಳೆಗಾಲದಲ್ಲೂ ಉಡುಪಿಯ ಜನರಿಗೆ ಒದಗಿಸುವ ಸಲುವಾಗಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳವು ದಿನಾಂಕ: 4, 5 ಮತ್ತು 6 ರಂದು ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಆಯೋಜಿಸಲಾಗಿದೆ.

ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಪತ್ರೊಡೆ, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಗೋಳಿ ಸೋಡಾ, ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ  ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ
9844993565, 9663349808 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *