
ಕುಂದಾಪುರ: ಪಟ್ಟಣದ ಕೋ ಆಪರೇಟಿವ್ ಸೊಸೈಟಿ ಯೊಂದು ಆರ್ ಬಿ ಐ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿರುವುದಲ್ಲದೆ ಸೊಸೈಟಿಯ ಗ್ರಾಹಕರ ಖಾತೆಯ ಮಾಹಿತಿಗಳನ್ನು ಇಲ್ಲಿಯ ಸಿಬ್ಬಂದಿ ಇತರರಿಗೆ ನೀಡಿ ಗ್ರಾಹಕರಿಗೆ ವಂಚನೆ ನಡೆಸಿರುವ ಬಗ್ಗೆ ಆರೋಪಿಸಲಾಗಿದೆ.
ಕುಂದಾಪುರ ಶ್ರೀ ಮಹಾಲಕ್ಷ್ಮೀ ಪ್ರೈಮರಿ ಕೋ ಆಪರೇಟಿವ್ ಸೊಸೈಟಿ ಯಲ್ಲಿ ಆರ್ ಬಿ ಐ ನಿಯಮಗಳನ್ನು ಗಾಳಿಗೆ ತೂರಿ ಇತರ ಕೋ ಆಪರೇಟಿವ್ ಸೊಸೈಟಿಗಳ ಹಣವನ್ನು ತಮ್ಮ ಸೊಸೈಟಿಯಲ್ಲಿ ಖಾತೆ ತೆರೆಯಲು ಅವಕಾಶ ನೀಡುವ ಮೂಲಕ ಇತರ ಸೊಸೈಟಿ ಗಳ ಖಾತೆ ತೆರೆದು ಬ್ರಹತ್ ಮೊತ್ತ ಗಳನ್ನು ಈ ಖಾತೆಗಳಲ್ಲಿ ಜಮೆ ಮಾಡಲಾಗುತ್ತಿದೆ ಎಂಬ ಅಧಿಕೃತ ಮಾಹಿತಿ ಸೊಸೈಟಿಯ ಸಿಬ್ಬಂದಿಯಿಂದಲೇ ಬಹಿರಂಗಗೊಂಡಿದೆ.
ಆರ್ ಬಿ ಐ ನಿಯಮಾವಳಿಯಂತೆ ಯಾವುದೇ ಹಣಕಾಸು ವ್ಯವಹಾರ ನಡೆಸುವ ಸೊಸೈಟಿ ಇನ್ನೊಂದು ಸೊಸೈಟಿಯ ಖಾತೆ ಯಲ್ಲಿ ತನ್ನ ಗ್ರಾಹಕರ ಹಣವನ್ನು ಇರಿಸಲು ಅವಕಾಶವಿರುವುದಿಲ್ಲ. ಈ ಮೂಲಕ ಗ್ರಾಹಕರ ಹಣಕ್ಕೆ ಭದ್ರತೆ ಇಲ್ಲದಂತಾಗುತ್ತದೆ. ಇದೂ ಅಲ್ಲದೆ ಸೊಸೈಟಿ ಒಳಗಿನ ಗುಪ್ತ ಖಾತೆಗಳ ವ್ಯವಹಾರದ ಗೌಪ್ಯ ಮಾಹಿತಿಯನ್ನು ಸೊಸೈಟಿಯ ಸಿಬ್ಬಂದಿಗಳೇ ಇತರರಿಗೆ ವಾಟ್ಸಪ್ ಮೂಲಕ ಹಂಚಿಕೊಳ್ಳುವ ಮೂಲಕ ಗ್ರಾಹಕರ ಬ್ಯಾಂಕ್ ಬ್ಯಾಲೆನ್ಸ್ ಇನ್ನಿತರ ಮಾಹಿತಿಗಳು ಸೋರಿಕೆ ಯಾಗಿದ್ದು ಸೊಸೈಟಿಯು ಗ್ರಾಹಕರನ್ನು ವಂಚಿಸಿದಂತಾಗಿದೆ.
ಈ ಬಗ್ಗೆ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಬೇಕಾದರೆ ಸೊಸೈಟಿಯ ಗುಪ್ತ ಮಾಹಿತಿ ಬಹಿರಂಗಪಡಿಸುತ್ತಿರುವ ಸಿಬ್ಬಂದಿ ಯನ್ನು ಸೇವೆಯಿಂದ ವಜಾ ಗೊಳಿಸಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೆ ಸಂಬಂಧ ಪಟ್ಟ ಇಲಾಖೆಯು ಈ ಸೊಸೈಟಿ ಯಲ್ಲಿರುವ ಇತರ ಸೊಸೈಟಿಗಳ ಖಾತೆಯಲ್ಲಿದುವ ಹಣವು ಅಕ್ರಮ ವೋ ಏನು ಎಂಬ ಬಗ್ಗೆ ತನಿಖೆ ನಡೆಸಿ ಯಾವುದೇ ಸೊಸೈಟಿಯ ಗ್ರಾಹಕರಿಗೆ ವಂಚನೆ ಯಾಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಆರೋಪಿಸಿದ್ದಾರೆ.
Leave a Reply