
ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಗೃಹ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಹಿರಿಯ ಅಂಕಣಕಾರ ವಿಜ್ಞಾನಿ ದಿವಂಗತ ಹಾಲ್ದೊಡ್ಡೇರಿ ಸುಧೀಂದ್ರ ಅವರ ಶ್ರೀಮತಿ ಸೌಮ್ಯ ಸುಮಾ ಮತ್ತು ಬೆಂಗಳೂರಿನ ಲೇಖಕಿಯರಾದ ಪೂರ್ಣಿಮಾ, ಸುನೀತಾ, ಸಂಧ್ಯಾ ತಂಡವು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಲ್ದೊಡ್ಡೇರಿ ಸುಧೀಂದ್ರ ರವರು ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅದರಲ್ಲೂ ಅಂಕಣ ಕ್ಷೇತ್ರಕ್ಕೆ ನೀಡಿದ ಸೇವೆ ಅನನ್ಯವಾದದ್ದು ಎಂದರು.
ಅಡಿಗರ ಗೃಹ ಕಚೇರಿಯಲ್ಲಿ ರಚಿಸಿದ ಗ್ರಂಥಾಲಯ ಕೊಂಡಾಡಿದ ಲೇಖಕಿಯರು ಉಡುಪಿ ಜಿಲ್ಲೆಯಲ್ಲಿ ಜಾಗೃತವಾಗಿರುವ ಕನ್ನಡ ಪ್ರಜ್ಞೆ ಪ್ರಶಂಸಿದರು.ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ,ಲೇಖಕಿ ಸುವ್ರತಾ ಅಡಿಗ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಗೃಹ ಕಚೇರಿಗೆಹಿರಿಯ ಅಂಕಣಕಾರ ವಿಜ್ಞಾನಿ ದಿವಂಗತ ಹಾಲ್ದೊಡ್ಡೇರಿ ಸುಧೀಂದ್ರ ಅವರ ಶ್ರೀಮತಿ ಸೌಮ್ಯ ಸುಮಾ ಮತ್ತು ಬೆಂಗಳೂರಿನ ಲೇಖಕಿಯರಾದ ಪೂರ್ಣಿಮಾ, ಸುನೀತಾ, ಸಂಧ್ಯಾ ತಂಡವು ಭೇಟಿ ನೀಡಿತು.
Leave a Reply