Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರ : ಗೋವಿನ ರುಂಡ ರಸ್ತೆಯಲ್ಲಿ ಎಸೆದ ಪ್ರಕರಣ, ಆರು ಮಂದಿ ಬಂಧನ

ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ  ಆರೂರು ಗ್ರಾಮದ ಕುಂಜಾಲ್‌ ಜಂಕ್ಷನ್‌ ಬಳಿ ಗೋವಿನ ರುಂಡವನ್ನು ರಸ್ತೆಯಲ್ಲೇ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ರಾಮ(49) ಕುಂಜಾಲು, ಪ್ರಸಾದ್‌(21) ಕುಂಜಾಲು,  ನವೀನ್‌(35) ಮಟಪಾಡಿ, ಕೇಶವ ನಾಯ್ಕ್‌(50) ಸಂದೇಶ(35), ರಾಜೇಶ್ (28), ಕುಂಜಾಲು ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇವರು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿದ್ದವು. ಪ್ರಕರಣದಲ್ಲಿ ಭಾಗಿಯಾದ ಹೊಂಡ ಆಕ್ಟಿವಾ ಹಾಗೂ  ಸ್ವಿಫ್ಟ್‌ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದರು.

Leave a Reply

Your email address will not be published. Required fields are marked *