
ಕೋಟ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಕಾರ್ಕಡ ಬಡಾಹೋಳಿ ರಾಮಕೃಷ್ಣ ಕಾರಂತರ ಕುಟುಂಬಕ್ಕೆ ಕಾರ್ಕಡ ಗ್ರಾಮದ ಬ್ರಾಹ್ಮಣ ಸಮಾಜದ ವತಿಯಿಂದ ಸಂಗ್ರಹಿಸಿದ ರೂ.1,74,500/- ಸಹಾಯಧನವನ್ನು ಅವರ ಪತ್ನಿ ಲಕ್ಷ್ಮಿ ಕಾರಂತರಿಗೆ ಜು.13ರ ಭಾನುವಾರ ಕಾರ್ಕಡ ದ ಕೆ.ತಾರಾನಾಥ ಹೊಳ್ಳರ ಮನೆ ಭೂಮಿಕಾ ಅಂಗಳದಲ್ಲಿ ಪದ್ಮನಾಭ ಸೋಮಯಾಜಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಸೀತಾರಾಮ ಸೋಮಯಾಜಿ, ಗುರುಗಳಾದ ಸುದರ್ಶನ ಐತಾಳ,ಕೆ. ಲಕ್ಷ್ಮಣ ನಕ್ಷತ್ರಿ, ಕೆ. ವಿಶ್ವೇಶ್ವರ ಹೊಳ್ಳ, ಕೆ. ರವಿರಾಜ ಉಪಾಧ್ಯ,ಕೆ. ನಾಗರಾಜ ಉಪಾಧ್ಯ, ಕೆ. ನಾಗರಾಜ ಮಧ್ಯಸ್ಥ, ಕೆ. ಚಂದ್ರಶೇಖರ ಸೋಮಯಾಜಿ,ಸುಬ್ರಮಣ್ಯ ಹೆಬ್ಬಾರ, ಕೆ. ಪುರುಷೋತ್ತಮ ಮಧ್ಯಸ್ಥ, ಸತ್ಯನಾರಾಯಣ ಐತಾಳ,ಕೆ. ಶಶಿಧರ ಮಯ್ಯ,ರಘುರಾಮ ಹೊಳ್ಳ ಮತ್ತು ಕೆ. ತಾರಾನಾಥ ಹೊಳ್ಳ ದಂಪತಿಗಳು ,ಮೃತರ ಸಹೋದರ ಕೆ. ರಾಘವೇಂದ್ರ ಕಾರಂತ ಉಪಸ್ಥಿರಿದ್ದರು.
Leave a Reply