
ಸಾವಳಗಿ: ಸರ್ಕಾರದ ಶಕ್ತಿಯೋಜನೆಯಿಂದ ರಾಜ್ಯಾದ್ಯಂತ ಸುಮಾರು ೫೦೦ ಕೋಟಿ ಮತ್ತು ತಾಲೂಕಿನಾದ್ಯಂತ ೨ಕೋಟಿ ೫೦ಲಕ್ಷ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುವ ಮೂಲಕ ೫ ಕೋಟಿ ಆದಾಯ ಬಂದಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಜಮಖಂಡಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ವತಿಯಿಂದ ಶಕ್ತಿಯೋಜನೆಯ ೫೦೦ ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಗಡಿಯನ್ನು ಮೀರಿದ ಸಂಭ್ರಮದ ಆಚರಣೆ ಅಂಗವಾಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನಗಳ ಪೂಜೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಣೆ ಕಾಯಕ್ರಮಕ್ಕೆ ಬಸ್ ಚಾಲನೆ ಮಾಡುವ ಮೂಲಕ ಚಾಲನೆ ಮಾಡಿದರು.
ನಂತರ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠನಗೊಂಡು ೨ ವರ್ಷಯಶಸ್ವಿ ಹಿನ್ನಲೆ ಎಲ್ಲಾ ಯೋಜನೆಗಳಿಂದ ಬಡವರಿಗ ಆರ್ಥಿಕ ಶಕ್ತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿದೆ. ಕೆಲ ಬಡ ಎನ್.ಜಿ.ಒ ಮಹಿಳೆ ತನಗೆ ಬರುವ ೬ ಸಾವಿರ ವೇತನ ಮೊದಲಿಗೆ ಸಾರಿಗೆಗೆ ಸಾಲುತ್ತಿರಲಿಲ್ಲ ಇಂದು ಶಕ್ತಿ ಯೋಜನೆಯಿಂದ ಅದೇ ¸೬ ಸಾವಿರದಿಂದ ಮನೆ ನಡೆಸುತ್ತಿದ್ದಾರೆ. ಇಂತಹ ಹಲವಾರು ಮಹಿಳೆಯರು ತಾಯಂದಿರು ನಿಶ್ಚಿಂತೆಯಿoದ ಜೀವನ ನಡೆಸಲು ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಅನುಸ್ಠಾನ ಸಮೀತಿ ಅದ್ಯಕ್ಷ ಯೋಜನೆಯ ಕಲ್ಲಪ್ಪ ಗಿರಡ್ಡಿ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಬಿ.ಎಸ್.ಸಿಂಧೂರ, ವರ್ಧಮಾನ ನ್ಯಾಮಗೌಡ, ಶ್ಯಾಮರಾವ ಘಾಟಗೆ, ಈಶ್ವರ ಕರಬಸನ್ನವರ, ಭಾಸ್ಕರ ಬಡಿಗೇರ, ನಿಂಗಪ್ಪ ಕಡಪಟ್ಟಿ, ಸಿದ್ದು ಮೀಸಿ, ಈಶ್ವರ ವಾಳೆನ್ನವರ, ಮುತ್ತಣ್ಣ ಮೇತ್ರಿ, ದಾನೇಶ ಘಾಟಗೆ, ಬಸವರಾಜ ಹರಕಂಗಿ, ದಿಲಾವರ ಶಿರೋಳ, ಸಾಧಿಕ ಬಂಟನೂರ, ಕುಮಾರ ಆಲಗೂರ, ರೋಹಿತ ಸರ‍್ಯವಂಶಿ, ಮೀರಾ ಒಚಿಟಮೋರಿ ಸಹಿತ ಹಲವರು ಇದ್ದರು.
Leave a Reply