
🖋️ ಹನೀಫ್ ಕಾಪು
ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿರುವ ಉಡುಪಿಯ ಆಪತ್ಬಂದವಿ ಖ್ಯಾತಿಯ ವಿನುತ ಕಿರಣ್ ರವರು 38 ಭಾರಿ ರಕ್ತದಾನವನ್ನು ಮಾಡುವ ಮೂಲಕ ತನ್ನ ಸರ್ವಸ್ವವನ್ನೇ ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಇವರು ತಾವು ಮಾತ್ರ ರಕ್ತದಾನ ಮಾಡುವುದಲ್ಲದೆ ತನ್ನ ಸುತ್ತಮುತ್ತಲಿರುವವರಿಗೆ ರಕ್ತದಾನದ ಮಹತ್ವವನ್ನು ತಿಳಿಸಿ ಅದೆಷ್ಟೋ ಜನರಿಂದ ರಕ್ತದಾನ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ವಿಧ್ಯಾವಂತೆ, ಬುದ್ಧಿವಂತೆ, ದೈರ್ಯವಂತೆ ಜೀವನದಲ್ಲಿ ಅದೆಷ್ಟೋ ಏಳು ಬೀಳುಗಳನ್ನು ಕಂಡರು ಸಹ ಮರುಕ್ಷಣದಲ್ಲಿ ಫಿನಿಕ್ಸ್ ಹಕ್ಕಿಯಂತೆ ಮೇಲೇಳುವುದು ಇವರ ವಿಶೇಷತೆ.
ಕಳೆದ 15 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ, ಯಾವುದೇ ರೀತಿಯ ಪ್ರಚಾರ ಬಯಸದೇ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಸ್ನೇಹಿತ ವರ್ಗದಲ್ಲಿ ಅಕ್ಕಾ ಎಂದೇ ಕರೆಯಲ್ಪಡುವ ಮಾತೃಹೃದಯಿ ವಿನುತ ಕಿರಣ್ ರವರ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಗೆ ಧನ್ಯವಾದಗಳು ಹಾಗೂ ಇನ್ನಷ್ಟು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಲಿ ಎಂಬುದೇ ನಮ್ಮ ಆಶಯ.
Leave a Reply