ಕೋಟ: ಇಲ್ಲಿನ ಕೋಟದ ಮೂಡುಗಿಳಿಯಾರು ಹಾಗೂ ಹೊನ್ನಾರಿ ಅಂಗನವಾಡಿಯಲ್ಲಿ ಗಿಳಿಯಾರು ಯುವಕ ಮಂಡಲದ ವತಿಯಿಂದ ವಿರ್ವಿ ಜಾತಿಯ ಸಸ್ಯಗಳ ವಿತರಣೆ ಹಾಗೂ ವನಮಹೋತ್ಸವ, ದಾನಿಗಳ ನೆರವಿನಿಂದ 1ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ಎಲ್ ಕೆಜಿ ಯುಕೆಜಿ ವಿದ್ಯಾರ್ಥಿಗಳಿಗೆ ಡೆಸ್ಕ್ ಸೆಟ್ ವಿತರಣಾ ಕಾರ್ಯಕ್ರಮ ಜು.31 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಸುಭಾಸ್ ಪೂಜಾರಿ ವಹಿಸಿದ್ದರು.
ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಸಂತಿ ಹಾಗೂ ಸಿಬ್ಬಂದಿ ವರ್ಗ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯೋಗಾನಂದ ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಜಲಜಾಕ್ಷಿ ಹಾಗೂ ಗಂಗಾ ಟೀಚರ್, ಅಂಗನವಾಡಿ ಮಕ್ಕಳ ಪೊಷಕರು ,ಯುವಕ ಮಂಡಲದ ಸದಸ್ಯರಾದ ಯೋಗಾನಂದ ಹೆಗ್ಡೆ,ರಾಮಚಂದ್ರ ಆಚಾರ್, ನಯನ್, ಜಯ, ಸುರೇಶ್ ಗಿಳಿಯಾರ್ ಮತ್ತು ರಾಘವೇಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ನಂದೀಶ್ ಹೇರ್ಳೆ ನಿರೂಪಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ಆದರ್ಶ ಧನ್ಯವಾದ ಸಮರ್ಪಿಸಿದರು, ಉದ್ಯಮಿಗಳಾದ ಜೆ.ಪಿ ಗಿಳಿಯಾರ್, ಪುಣ್ಯ ಕ್ಯಾಟ್ರಸ್ ಬೆಂಗಳೂರು ಸಹಕಾರ ನೀಡಿದರು.

ಗಿಳಿಯಾರು ಯುವಕ ಮಂಡಲದ ವತಿಯಿಂದ ಮೂಡುಗಿಳಿಯಾರು ಶಾಲೆಯಲ್ಲಿ ವಿವಿಧ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಸುಭಾಸ್ ಪೂಜಾರಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಸಂತಿ ಹಾಗೂ ಸಿಬ್ಬಂದಿ ವರ್ಗ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯೋಗಾನಂದ ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಜಲಜಾಕ್ಷಿ ಇದ್ದರು.














Leave a Reply