Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ದಿನಾಚರಣೆ, ಕೊಡುಗೆ ಹಸ್ತಾಂತರ

ಕೋಟ: ಸಾಲಿಗ್ರಾಮ ಕಾಂಗ್ರೆಸ್ ಸ್ಥಾನೀಯ ಸಮಿತಿಯಿಂದ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜನ್ಮ ದಿನ ಆಚರಣೆ ಹಾಗೂ ಶ್ರೀ ಅಮೃತೇಶ್ವರಿ ಮಕ್ಕಳ (ಬಾಲ) ಭಜನಾ ತಂಡಕ್ಕೆ ಸಮವಸ್ತçದ ಬಗ್ಗೆ ಸಹಾಯ ಧನ ಹಸ್ತಾಂತರ ಕಾರ್ಯಕ್ರಮ ಭಾನುವಾರ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಜರಗಿತು.

ಸಭೆ ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಪಿ. ಶ್ರೀನಿವಾಸ್ ಅಮೀನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ  ಉಡುಪಿ ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ವಿಕಾಸ ಹೆಗಡೆ ಕುಂದಾಪುರ ಮಾತನಾಡಿ ಬಡವರ ಬಾಳಿನ ಬೆಳಕು, ಬಡವರ ಬಂಧು, ಅನ್ನರಾಮಯ್ಯರಾಗಿ ಜನಸಾಮಾನ್ಯರನ್ನು ಗೆದ್ದ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯನವರ ಜನ್ಮದಿನಾಚರಣೆಗೆ ಶುಭ ಹಾರೈಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಅಮೃತೇಶ್ವರಿ ಮಕ್ಕಳ (ಬಾಲ) ಭಜನಾ ತಂಡಕ್ಕೆ ಸಮವಸ್ತç ಹೊಂದಲು ಸಾಲಿಗ್ರಾಮ ಕಾಂಗ್ರೆಸ್ ಸ್ಥಾನೀಯ ಸಮಿತಿಯು  ಕೊಡ ಮಾಡಿದ ಸಹಾಯ ಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನಾಚರಣೆಯ ಅಂಗವಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾರ್ಯದರ್ಶಿ ರವೀಂದ್ರ ಕಾಮತ್, ಸಾಲಿಗ್ರಾಮ ಕಾಂಗ್ರೆಸ್ ಸ್ಥಾನಿಯ ಸಮಿತಿಯ ಜೊತೆ ಕಾರ್ಯದರ್ಶಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಪಿ. ಶೇಖರ ಮರಕಾಲ ಕಾರ್ಕಡ,
ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಮಹಮ್ಮದ್ ಸುಹಾನ್ ಸಾಸ್ತಾನ, ಕಾಂಗ್ರೆಸ್ ಹಿರಿಯ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಕೋಟ ಬ್ಲಾಕ್ ಹಿಂದುಳಿದ ಘಟಕದ ನಾಯಕ ದಿನೇಶ್ ಬಂಗೇರ ಗುಂಡ್ಮಿ, ಕೋಟ ಸಿಎ ಬ್ಯಾಂಕ್‌ನ ಮಾಜಿ ನಿರ್ದೇಶಕ ಅಚ್ಚುತ ಪೂಜಾರಿ ಕಾರ್ಕಡ,
ಕೋಟ ಹಲವು ಮಕ್ಕಳ ತಾಯಿ  ಶ್ರೀ ಅಮೃತೇಶ್ವರಿ ದೇವಸ್ಥಾನ ಕೋಟ ಇದರ ಆಡಳಿತ ಮಂಡಳಿ ಸದಸ್ಯ ಗಣೇಶ್ ಕೆ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಸ್ಥಾನೀಯ ಸಮಿತಿಯ ಕಾರ್ಯಕರ್ತರು ಮತ್ತು  ಶ್ರೀ ಅಮೃತೇಶ್ವರಿ ಮಕ್ಕಳ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು.

ಕೋಟ ಬ್ಲಾಕ್ ಕಾಂಗ್ರಸ್ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮ ಕೋಟ ಬ್ಲಾಕ್ ಕಛೇರಿಯಲ್ಲಿ ಜರಗಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಪಿ. ಶ್ರೀನಿವಾಸ್ ಅಮೀನ್, ಉಡುಪಿ ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ವಿಕಾಸ ಹೆಗಡೆ, ಶ್ರೀ ಅಮೃತೇಶ್ವರಿ ದೇವಸ್ಥಾನ ಕೋಟ ಇದರ ಆಡಳಿತ ಮಂಡಳಿ ಸದಸ್ಯ ಗಣೇಶ್ ಕೆ ನೆಲ್ಲಿಬೆಟ್ಟು ಇದ್ದರು.

Leave a Reply

Your email address will not be published. Required fields are marked *