ಕೋಟ: ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ನೂತನ ಸಮಿತಿಯನ್ನು ಇತ್ತೀಚಿಗೆ ರಚಿಸಲಾಯಿತು.
ಕಲಾರಂಗದ ಯಕ್ಷ ಗುರುಗಳಾದ ಪ್ರಸಾದ್ ಕುಮಾರ ಮೂಗೆಬೆಟ್ಟು ಇವರ ಮಾರ್ಗದರ್ಶನದೊಂದಿಗೆ ನೂತನ ಅಧ್ಯಕ್ಷರಾಗಿ ಗಿರೀಶ್ ಗಾಣಿಗ ಬೆಟ್ಲಕ್ಕಿ ಆಯ್ಕೆಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ ದೇವಾಡಿಗ ಹರ್ತಟ್ಟು, ಕೋಶಾಧಿಕಾರಿಯಾಗಿ ಕಾರ್ತಿಕ್ ಆಚಾರ್ಯ, ಉಪಾಧ್ಯಕ್ಷರಾಗಿ ಶ್ರೀನಾಥ್ ಉರಾಳ ಚಿತ್ರಪಾಡಿ, ಜೊತೆ ಕಾರ್ಯದರ್ಶಿಯಾಗಿ ಅನೂಪ್ ಉರಾಳ ಹಾಗೂ ಕಾರ್ಯಧ್ಯಕ್ಷರಾಗಿ ಹರೀಶ್ ದೇವಾಡಿಗ ಗಿಳಿಯಾರು ಆಯ್ಕೆಯಾದರು.
ಸಭೆಯಲ್ಲಿ ಕಲಾರಂಗದ ಹಿರಿಯ ಕಲಾವಿದರಾದ ಗೋಪಾಲಕೃಷ್ಣ ಪೈ ಗಿಳಿಯಾರು, ಶಂಕರ್ ದೇವಾಡಿಗ ಕಾರ್ಕಡ, ಸ್ಥಾಪಕ ಅಧ್ಯಕ್ಷರಾದ ಹರೀಶ್ ಭಂಡಾರಿ, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಪಡುಕರೆ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಕರ್ಕೆರ ಕೋಡಿ ಉಪಸ್ಥಿತರಿದ್ದರು. ಸಂಘದ ಕಲಾವಿದರಾದ ಯಶಸ್ ಮತ್ತು ರಾಹುಲ್ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಶಾಂತ್ ಕೊಳಂಬೆ ಸ್ವಾಗತಿಸಿದರು ಮತ್ತು ರಿತೇಶ್ ಕೊಳಂಬೆ ವಂದಿಸಿದರು.














Leave a Reply