Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬದುಕಿನ ಯಶಸ್ಸಿಗೆ ಮೌಲ್ಯಗಳೆ ಅಡಿಪಾಯ – ಶ್ರೀಮತಿ ಸಂಧ್ಯಾ ಶೆಣೈ

ಜೀವನದ ಅನುಭವದಲ್ಲಿ ಮೌಲ್ಯಗಳು ಸದ ತುಂಬಿರುತ್ತವೆ. ಅವುಗಳನ್ನು ಕಂಡುಕೊಳ್ಳುವುದು ನಮ್ಮ ಕರ್ತವ್ಯ. ಬದುಕಿನ ಯಶಸ್ಸಿಗೆ ಈ ಮೌಲ್ಯಗಳೆ ಅಡಿಪಾಯ ಎಂದು ಉಡುಪಿಯ ಸಾಹಿತಿ ಶ್ರೀಮತಿ ಸಂಧ್ಯಾ ಶೆಣೈ ಹೇಳಿದರು.

ನೆರಳು ಚಾರಿಟೇಬಲ್ ಟ್ರಸ್ಟ್ ಅರಸಮ್ಮಕಾನು – ಶೇಡಿಮನೆ ಇವರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿ ನಡೆಯುತ್ತಿರುವ ಪ್ರೇರಣಾ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಜೀವನ ಮೌಲ್ಯಗಳು ನಮ್ಮ ದಿನನಿತ್ಯದ ಆಗಹೋಗುಗಳಲ್ಲಿ ತುಂಬಿರುತ್ತವೆ. ಅವುಗಳನ್ನು ಗುರುತಿಸಿ ಅನುಸರಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು.

ಗುರು ಹಿರಿಯರು, ತಂದೆ – ತಾಯಿಯರನ್ನು ಗೌರವದಿಂದ ಕಾಣುವ ಆದರ್ಶವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಹಾಸ್ಯ ಬೆರೆಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಯು.ಕೆ ಇನ್‌ಫೋಟೆಕ್ ಶಂಕರನಾರಾಯಣದ ಶ್ರೀ ಉದಯ ಶೆಟ್ಟಿ, ಕಾಲೇಜಿನ ಸಾಂಸ್ಥಿಕ ವ್ಯವಸ್ಥೆ ಮತ್ತು ಪ್ರಾಂಶುಪಾಲರ ದೂರದೃಷ್ಟಿಯ ಯೋಜನೆಗಳು, ಶಿಸ್ತು, ಶಿಕ್ಷಣದ ಗುಣಾತ್ಮಕ ಅಂಶಗಳನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಜೀವನದಲ್ಲಿ ದೃಢ ನಿರ್ಧಾರಗಳಿರಬೇಕು. ಅವು ಮೌಲ್ಯಗಳಿಂದ ಕೂಡಿದ್ದರೆ ಬೇಗ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿ ಸುಮ ಮತ್ತು ಐಶ್ವರ್ಯ ಪ್ರಾರ್ಥಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ವಸಂತ ಜಿ ಸ್ವಾಗತಿಸಿದರು.

ನೆರಳು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ. ಕೆ ರಾಧಾಕೃಷ್ಣ ಕ್ರಮಧಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀ ಮಹಾಲಿಂಗಪ್ಪ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಕಾರ್ಯಕ್ರಮವನ್ನು ನಿರೂಪಿಸಿದರು. ನೆರಳು ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಶ್ರೀ ರಾಜೀವ್ ಪೂಜಾರಿ, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.

ಜೀವನದ ಅನುಭವದಲ್ಲಿ ಮೌಲ್ಯಗಳು ಸದಾ ತುಂಬಿರುತ್ತವೆ. ಅವುಗಳನ್ನು ಕಂಡುಕೊಳ್ಳುವುದು ನಮ್ಮ ಕರ್ತವ್ಯ. ಬದುಕಿನ ಯಶಸ್ಸಿಗೆ ಈ ಮೌಲ್ಯಗಳೆ ಅಡಿಪಾಯ ಎಂದು ಉಡುಪಿಯ ಸಾಹಿತಿ ಶ್ರೀಮತಿ ಸಂಧ್ಯಾ ಶೆಣೈ ಹೇಳಿದರು.

ನೆರಳು ಚಾರಿಟೇಬಲ್ ಟ್ರಸ್ಟ್ ಅರಸಮ್ಮಕಾನು – ಶೇಡಿಮನೆ ಇವರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿ ನಡೆಯುತ್ತಿರುವ ಪ್ರೇರಣಾ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಜೀವನ ಮೌಲ್ಯಗಳು ನಮ್ಮ ದಿನನಿತ್ಯದ ಆಗಹೋಗುಗಳಲ್ಲಿ ತುಂಬಿರುತ್ತವೆ. ಅವುಗಳನ್ನು ಗುರುತಿಸಿ ಅನುಸರಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಗುರು ಹಿರಿಯರು, ತಂದೆ – ತಾಯಿಯರನ್ನು ಗೌರವದಿಂದ ಕಾಣುವ ಆದರ್ಶವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಹಾಸ್ಯ ಬೆರೆಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಯು.ಕೆ ಇನ್‌ಫೋಟೆಕ್ ಶಂಕರನಾರಾಯಣದ ಶ್ರೀ ಉದಯ ಶೆಟ್ಟಿ, ಕಾಲೇಜಿನ ಸಾಂಸ್ಥಿಕ ವ್ಯವಸ್ಥೆ ಮತ್ತು ಪ್ರಾಂಶುಪಾಲರ ದೂರದೃಷ್ಟಿಯ ಯೋಜನೆಗಳು, ಶಿಸ್ತು, ಶಿಕ್ಷಣದ ಗುಣಾತ್ಮಕ ಅಂಶಗಳನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಜೀವನದಲ್ಲಿ ದೃಢ ನಿರ್ಧಾರಗಳಿರಬೇಕು. ಅವು ಮೌಲ್ಯಗಳಿಂದ ಕೂಡಿದ್ದರೆ ಬೇಗ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿ ಸುಮ ಮತ್ತು ಐಶ್ವರ್ಯ ಪ್ರಾರ್ಥಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ವಸಂತ ಜಿ ಸ್ವಾಗತಿಸಿದರು.

ನೆರಳು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ. ಕೆ ರಾಧಾಕೃಷ್ಣ ಕ್ರಮಧಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀ ಮಹಾಲಿಂಗಪ್ಪ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಕಾರ್ಯಕ್ರಮವನ್ನು ನಿರೂಪಿಸಿದರು. ನೆರಳು ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಶ್ರೀ ರಾಜೀವ್ ಪೂಜಾರಿ, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *