
ಕೋಟ: ಇಲ್ಲಿನ ಮಣೂರು ರಾಮಪ್ರಸಾದ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಮತ್ತು ಸಿಎಚ್ಸಿ ಕೋಟ ಜಂಟಿಯಾಗಿ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯಲ್ಲಿ ಗರ್ಭಿಣಿ ಸೀಮಂತ ಕಾರ್ಯಕ್ರಮ ವರಮಹಾಲಕ್ಷ್ಮಿ ಪೂಜೆ ನಡೆಸಲಾಯಿತು.
ಕೋಟ ಸಿಎಚ್ಸಿ ಡಾ.ಮಾಧವ ಪೈ ಅವರು ವಿಶ್ವ ಸ್ತನ್ಯಪಾನ ದಿನಾಚರಣೆ ಅಂಗವಾಗಿ ಎದೆ ಹಾಲಿನ ಮಹತ್ವ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕೋಟ ಸಿಎಚ್ಸಿ ಕೇಂದ್ರದ ಎಲ್ಎಚ್ ವಿಶೋಭಾ ಸ್ವಚ್ಛತೆ ಬಗ್ಗೆ ವಿವರಿಸಿದರು . ಆರೋಗ್ಯ ನಿರೀಕ್ಷ ಹರಿಶ್ಚಂದ್ರ ಡೆಂಗ್ಯೂ ಮಲೇರಿಯಾ ಬಗ್ಗೆ ತಿಳಿಸಿದರು.
ಕೋಟದ ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್,ಕೋಟ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ಪ್ರೇಮಾ ದೇವಾಡಿಗ ಉಪಸ್ಥಿತರಿದ್ದರು.
ಸ್ಥಳೀಯರಾದ ವಿಮಲ ದಿನೇಶ್ ಆಚಾರ್, ಸೈಮಾ ರವರಿಗೆ ಸೀಮಂತ ಕಾರ್ಯಕ್ರಮ ನೆರವೆರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ನಿರ್ಮಲ ಉರಾಳ ಸ್ವಾಗತಿಸಿದರು.ಸಹಾಯಕಿ ಸುಜಾತ ವಂದಿಸಿದರು.ಎಲ್ಲಾ ಆಶಾ ಕಾರ್ಯಕರ್ತೆರು ಕಾರ್ಯಕರ್ಮದಲ್ಲಿ ಭಾಗವಹಿಸಿದ್ದರು.
ಮಣೂರು ರಾಮಪ್ರಸಾದ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನದಡಿ ಸ್ಥಳೀಯರಾದ ವಿಮಲ ದಿನೇಶ್ ಆಚಾರ್, ಸೈಮಾ ರವರಿಗೆ ಸೀಮಂತ ಕಾರ್ಯಕ್ರಮ ನೆರವೆರಿಸಲಾಯಿತು. ಕೋಟದ ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಕೋಟ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ಪ್ರೇಮಾ ದೇವಾಡಿಗ ಉಪಸ್ಥಿತರಿದ್ದರು.
Leave a Reply