
ಸಾವಳಗಿ: ಸ್ವಾತಂತ್ರೋತ್ಸವ ನಿಮಿತ್ಯವಾಗಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಅಗಸ್ಟ್ 15 ರಂದು ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನು “ಕರ್ನಾಟಕ ಯುವಕ ಮಂಡಳಿ” ಅಡಿಯಲ್ಲಿ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮಗಳ ವಿವಿರ: ಅ 15 ರಂದು ಬೆಳಿಗ್ಗೆ 9 ಗಂಟೆಗೆ 1 ನಿಮಿಷದ ಜೋಡೆತ್ತಿನ ಗಾಡಿಯ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ 1600 ಮೀಟರ ಓಟದ ಸ್ಪರ್ಧೆ, ಬೆಳಿಗ್ಗೆ 11ಗಂಟೆಗೆ 100 ಮೀಟರ ಓಟದ ಸ್ಪರ್ಧೆ, ಬೆಳಿಗ್ಗೆ 12 ಗಂಟೆಗೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಗಳು ಜರುಗಲಿವೆ, ಹೆಚ್ಚಿನ ಮಾಹಿತಿಗಾಗಿ ಕಮಿಟಿಯವರನ್ನು ಸಂಪರ್ಕಿಸಬೇಕು ಎಂದು ಕಮಿಟಿಯವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
Leave a Reply